ADVERTISEMENT

ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ: ವರದಿ

ನಿಜ್ಜರ್‌ ಹತ್ಯೆಯ ವಿವಾದದ ನಡುವೆ ಕೆನಡಾ ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.

ಪಿಟಿಐ
Published 6 ಅಕ್ಟೋಬರ್ 2023, 11:19 IST
Last Updated 6 ಅಕ್ಟೋಬರ್ 2023, 11:19 IST
<div class="paragraphs"><p>ಜಸ್ಟಿನ್‌ ಟ್ರುಡೊ&nbsp;</p></div>

ಜಸ್ಟಿನ್‌ ಟ್ರುಡೊ 

   

ಟೊರೊಂಟೊ: ಅಕ್ಟೋಬರ್‌ 10ರೊಳಗೆ ಸುಮಾರು 40 ಮಂದಿ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತ ಸೂಚನೆ ನೀಡಿತ್ತು.

ಈ ನಡುವೆ ಕೆನಡಾ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಬಹುಪಾಲು ರಾಜತಾಂತ್ರಿಕರನ್ನು ಕೌಲಾಲಂಪುರ ಹಾಗೂ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಖಾಸಗಿ ಒಡೆತನದ ಕೆನಡಾದ ಟೆಲಿವಿಷನ್ ನೆಟ್‌ವರ್ಕ್ ಸಿಟಿವಿ ನ್ಯೂಸ್‌ ವರದಿ ಮಾಡಿದೆ.

ADVERTISEMENT

ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಹೇಳಿದ್ದರು. ಆದರೆ ಅವರ ಹೇಳಿಕೆ ಅಸಂಬದ್ಧ ಎಂದು ಭಾರತ ಜರಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ರಾಜತಾಂತ್ರಿಕರನ್ನು ಉಚ್ಛಾಟನೆ ಮಾಡಿದ್ದವು.

ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ಸಂಖ್ಯೆಗೆ ಸಮನಾದ ಮಟ್ಟಕ್ಕೆ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯನ್ನು ತಗ್ಗಿಸಲು ಭಾರತ ಸರ್ಕಾರ ಕೆನಡಾಕ್ಕೆ ಅಕ್ಟೋಬರ್ 10ರವರೆಗೆ ಕಾಲಾವಕಾಶ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಟಿವಿ ನ್ಯೂಸ್ ವರದಿ ಮಾಡಿತ್ತು.

ಅಲ್ಲದೇ ನಿಗದಿತ ದಿನಾಂಕದ ನಂತರವೂ ಇಲ್ಲಿಯೇ ಉಳಿಯುವ ಅಧಿಕಾರಿಗಳಿಗೆ ಎಲ್ಲ ವಿನಾಯಿತಿಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.