ADVERTISEMENT

ದೀಪಾವಳಿ ಅಂಚೆ ಚೀಟಿ ಹೊರತಂದ ಕೆನಡಾ

ಪಿಟಿಐ
Published 24 ಅಕ್ಟೋಬರ್ 2025, 14:13 IST
Last Updated 24 ಅಕ್ಟೋಬರ್ 2025, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಟ್ಟಾವ: ಕೆನಡಾ ದೇಶದ ಬಹುಸಂಸ್ಕೃತಿಯ ಬೆಸುಗೆಯನ್ನು ಸಂಭ್ರಮಿಸುವ ಭಾಗವಾಗಿ ಇಲ್ಲಿನ ಅಂಚೆ ಇಲಾಖೆ ದೀಪಾವಳಿ ಪರಿಕಲ್ಪನೆಯ ಅಂಚೆ ಚೀಟಿಯನ್ನು ಹೊರತಂದಿದೆ.

ಒಟ್ಟಾವದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಂಪ್ರದಾಯಿಕ ರಂಗೋಲಿಯನ್ನೊಳಗೊಂಡ ಅಂಚೆ ಚೀಟಿ ಹೊರ ತಂದಿದ್ದಕ್ಕೆ ಇಲ್ಲಿನ ಅಂಚೆ ಇಲಾಖೆಗೆ ಧನ್ಯವಾದ ತಿಳಿಸಿ ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಪೋಸ್ಟ್ ಮಾಡಿದೆ.

ಭಾರತೀಯ ಮೂಲದ ಕಲಾವಿದರಾದ ರಿತು ಕನಾಲ್ ಅವರು ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಬೆಸೆದು ವಿನ್ಯಾಸಗೊಳಿಸಿರುವ ದೀಪಾವಳಿ ಪದದ ಚಿತ್ರವನ್ನು ಅಂಚೆಚೀಟಿಯಲ್ಲಿ ಬಳಸಲಾಗಿದೆ.

ADVERTISEMENT

‘ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಗುರುತಾಗಿ ಕೆನಡಾ ಹಾಗೂ ಜಗತ್ತಿನ ಎಲ್ಲ ಹಿಂದುಗಳು, ಸಿಖ್ಖರು, ಬೌದ್ಧರು, ಜೈನ ಮತ್ತು ಇತರೆ ಸಮುದಾಯಗಳು ಆಚರಿಸುವ ದೀಪಾವಳಿ ಹಬ್ಬದ ಪರಿಕಲ್ಪನೆಯ ಅಂಚೆ ಚೀಟಿ ಬಿಡುಗಡೆ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಅಂಚೆ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

2017ರಿಂದಲೂ ಕೆನಡಾ ದೀಪಾವಳಿ ಪರಿಕಲ್ಪನೆಯ ಅಂಚೆ ಚೀಟಿಗಳನ್ನು ಹೊರತರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.