ADVERTISEMENT

ಶ್ರೀಲಂಕಾ‌ | ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು, 23 ಜನರಿಗೆ ಗಾಯ

ಪಿಟಿಐ
Published 21 ಏಪ್ರಿಲ್ 2024, 14:18 IST
Last Updated 21 ಏಪ್ರಿಲ್ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಲೊಂಬೊ: ಮೋಟಾರ್‌ ಕಾರ್‌ ರೇಸಿಂಗ್‌ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ.

8 ವರ್ಷದ ಬಾಲಕ ಹಾಗೂ ನಾಲ್ವರು ಟ್ರ್ಯಾಕ್‌ ಸಹಾಯಕರು ಸೇರಿ 7 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ದೀಯತಲಾವದ ಸೆಂಟ್ರಲ್ ಹಿಲ್ ರೆಸಾರ್ಟ್‌ನಲ್ಲಿ ನಡೆದ ರೇಸ್‌ನಲ್ಲಿ ಕಾರೊಂದು ಟ್ರ್ಯಾಕ್‌ನಿಂದ ಪಲ್ಟಿಯಾಗಿ ಪ್ರೇಕ್ಷಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 23 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.