ADVERTISEMENT

ಕೋವಿಡ್‌: ಭಾರತಕ್ಕೆ ಸಹಾಯ ಹಸ್ತ ಚಾಚಿದ ಖ್ಯಾತ ಬಾಣಸಿಗ ವಿಕಾಸ್‌ ಖನ್ನಾ

ಭಾರತಕ್ಕೆ ಆಮ್ಲಜನಕ ಕಾನ್ಸಂಟ್ರೇಟರ್‌ಗಳು, ಪಿಪಿಇ ಕಿಟ್‌ಗಳ ರವಾನೆ

ಪಿಟಿಐ
Published 7 ಮೇ 2021, 8:21 IST
Last Updated 7 ಮೇ 2021, 8:21 IST
ವಿಕಾಸ್‌ ಖನ್ನಾ
ವಿಕಾಸ್‌ ಖನ್ನಾ   

ನ್ಯೂಯಾರ್ಕ್‌: ಭಾರತದ ಖ್ಯಾತ ಬಾಣಸಿಗ ವಿಕಾಸ್‌ ಖನ್ನಾ ಅವರು ಕೋವಿಡ್‌–19ಗೆ ಸಂಬಂಧಿಸಿದಂತೆ ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಮತ್ತು ಪಿಪಿಇ ಕಿಟ್‌ಗಳು ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ.

ಕಳೆದ ವರ್ಷ ಕೋವಿಡ್‌–19 ಮೊದಲ ಅಲೆಯ ಸಂದರ್ಭದಲ್ಲೂ ಭಾರತದಲ್ಲಿನ ಲಕ್ಷಾಂತರ ಮಂದಿಗೆ ಊಟ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿದ್ದರು.

ಈ ಬಾರಿ ಸುಮಾರು 10 ಸಾವಿರ ಆಮ್ಲಜನಕ ಕಾನ್ಸ್‌ಂಟ್ರೇಟರ್‌ಗಳು ಮತ್ತು 50 ಸಾವಿರ ಅಗ್ನಿನಿರೋಧಕ ಪಿಪಿಇ ಕಿಟ್‌ಗಳನ್ನು ಸಂಗ್ರಹಿಸಿ ಭಾರತಕ್ಕೆ ಕಳುಹಿಸುವುದು ಅವರ ಉದ್ದೇಶವಾಗಿದೆ.

ADVERTISEMENT

‘ಕೆಲವೇ ದಿನಗಳಲ್ಲಿ 5.25 ಲಕ್ಷ ಡಾಲರ್‌ (ಸುಮಾರು ₹4ಕೋಟಿ) ದೇಣಿಗೆ ಸಂಗ್ರಹವಾಗಿದೆ. 650 ಆಮ್ಲಜನಕ ಕಾನ್ಸ್‌ನ್ಟ್ರೇಟರ್‌ಗಳು ಮತ್ತು 5000 ಪಿಪಿಇ ಕಿಟ್‌ಗಳು ಈಗಾಗಲೇ ಭಾರತ ತಲುಪಿವೆ’ ಎಂದು ಖನ್ನಾ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ತಾಯ್ನಾಡಿನಲ್ಲಿನ ಪರಿಸ್ಥಿತಿ ಹೃದಯವಿದ್ರಾವಕವಾಗಿದೆ. ಎಲ್ಲರೂ ಸುರಕ್ಷಿತವಾಗಿ ಇರುವವರೆಗೂ ನಾವೆಲ್ಲರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು ಎನ್ನುವುದು ನನ್ನ ಆಶಯ. ಹೀಗಾಗಿ, ಪರಿಸ್ಥಿತಿ ಸುಧಾರಿಸುವವರೆಗೂ ನೆರವು ನೀಡುವ ಕಾರ್ಯವನ್ನು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.