ADVERTISEMENT

Turkey Syria Earthquake: 24,000 ಸನಿಹಕ್ಕೆ ಮೃತರ ಸಂಖ್ಯೆ; ಮಕ್ಕಳ ರಕ್ಷಣೆ

ಏಜೆನ್ಸೀಸ್
Published 11 ಫೆಬ್ರುವರಿ 2023, 5:44 IST
Last Updated 11 ಫೆಬ್ರುವರಿ 2023, 5:44 IST
   

ಕಹ್ರಮನ್ಮರಸ್‌: ಪ್ರಬಲ ಭೂಕಂಪ ಸಂಭವಿಸಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 24,000 ಸನಿಹಕ್ಕೆ ತಲುಪಿದೆ.

ಈವರೆಗೆ ಟರ್ಕಿಯಲ್ಲಿ 20,318 ಮತ್ತು ಸಿರಿಯಾದಲ್ಲಿ 3,355 ಮಂದಿ ಸಾವಿಗೀಡಾಗಿದ್ದಾರೆ.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶದ ಅವಶೇಷಗಳಡಿಯಿಂದ ಶನಿವಾರವೂ ಮಕ್ಕಳನ್ನು ಹೊರ ತರಲಾಗಿದ್ದು, ರಕ್ಷಣಾ ಕಾರ್ಯಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ.

ADVERTISEMENT

ಟರ್ಕಿ ಹಾಗೂ ಸಿರಿಯಾದಲ್ಲಿ ಒಟ್ಟು 8.7 ಲಕ್ಷ ಮಂದಿಗೆ ತುರ್ತಾಗಿ ಆಹಾರ ಪೂರೈಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಸಿರಿಯಾದಲ್ಲಿ ಮಾತ್ರವಾಗಿ 5.3 ದಶಲಕ್ಷ ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

ಸೋಮವಾರ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾವಿನ ಸಂಖ್ಯೆ ಹೆಚ್ಚುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.