ADVERTISEMENT

ಚೀನಾ: ಉನ್ನತ ಮಟ್ಟದ ಸಂಸದೀಯ ಸಮಿತಿಗೆ ನಿವೃತ್ತ ಜನರಲ್ ನೇಮಕ

ಭಾರತದ ವಿರುದ್ಧದ ಸಂಘರ್ಷದಲ್ಲಿ ಚೀನಾವನ್ನು ಮುನ್ನಡೆಸಿದ ಸೇನಾಧಿಕಾರಿ

ಪಿಟಿಐ
Published 1 ಮಾರ್ಚ್ 2021, 11:20 IST
Last Updated 1 ಮಾರ್ಚ್ 2021, 11:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀಜಿಂಗ್: ಇತ್ತೀಚೆಗೆ ಭಾರತದ ಪೂರ್ವ ಲಡಾಖ್‌ ಗಡಿಯಲ್ಲಿ ನಡೆದ ‘ಸೇನಾ ಸಂಘರ್ಷ‘ದ ವೇಳೆ ಚೀನಾ ಸೇನೆಯ ಮುನ್ನಡೆಸಿದ್ದ ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿಯ ನಿವೃತ್ತ ಉನ್ನತ ಅಧಿಕಾರಿ ಜನರಲ್ ಝಹೊ ಝೋಂಗ್ಕ್ವಿ ಅವರನ್ನು, ಸಂಸತ್ತು, ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌(ಎನ್‌ಪಿಸಿ)ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.

65 ವರ್ಷದ ಜನರಲ್ ಝಹೊ ಅವರು 2017ರಲ್ಲಿ ನಡೆದ ದೋಕಲಾ‌ ಸಂಘರ್ಷ ಮತ್ತು 2020ರಲ್ಲಿ ಪೂರ್ವ ಲಡಾಕ್‌ನಲ್ಲಿ ನಡೆದ ಸೇನಾ ಸಂಘರ್ಷದಲ್ಲಿ ಚೀನಾ ಸೇನೆಯನ್ನು ಮುನ್ನಡೆಸಿದ್ದರು.

ಪಿಎಲ್‌ಎ ನಿಯಮಗಳಂತೆ ಅವರು 65ನೇ ವರ್ಷಕ್ಕೆ ನಿವೃತ್ತಿಯಾದ ನಂತರ, ಎನ್‌ಪಿಸಿಯ ಪ್ರಭಾವಶಾಲಿ ಹುದ್ದೆಯಾದ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಮಾರ್ಚ್‌ 5ರಂದು ಎನ್‌ಪಿಸಿ ವಾರ್ಷಿಕ ಸಭೆ ಆರಂಭವಾಗಲಿದ್ದು, ಈ ಸಭೆಗೆ ಮುನ್ನ ಝಹೊ ನೇಮಕ ಪ್ರಕ್ರಿಯೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.