ADVERTISEMENT

ಆಸ್ಟ್ರೇಲಿಯಾದ ಗೋಮಾಂಸ ಆಮದಿಗೆ ತಡೆಯೊಡ್ಡಿದ ಚೀನಾ

ಏಜೆನ್ಸೀಸ್
Published 28 ಆಗಸ್ಟ್ 2020, 11:33 IST
Last Updated 28 ಆಗಸ್ಟ್ 2020, 11:33 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬೀಜಿಂಗ್‌: ಗೋಮಾಂಸದಲ್ಲಿ ನಿಷೇಧಿತ ಮದ್ದಿನ ಅಂಶ ಪತ್ತೆಯಾಗಿರುವ ಕಾರಣ ಚೀನಾವು ಆಸ್ಪ್ರೇಲಿಯಾದ ಜಾನ್‌ ಡೀ ವಾರ್ವಿಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಿಂದ ಗೋಮಾಂಸ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ.

ಜಾನ್‌ ಡೀ ವಾರ್ವಿಕ್‌ ಸಂಸ್ಥೆ ಪೂರೈಕೆ ಮಾಡುತ್ತಿದ್ದ ಗೋಮಾಂಸದಲ್ಲಿ ಕ್ಲೋರಾಮ್‌ಪೆನಿಕಲ್‌ ಮದ್ದಿನ ಅಂಶ ಪತ್ತೆಯಾಗಿದೆ. ಅವುಗಳನ್ನು ನಾಶಪಡಿಸಲಾಗಿದೆ ಎಂದು ಚೀನಾದ ಜನರಲ್‌ ಅಡ್ಮಿನಿಸ್ಟ್ರೇಷನ್‌ ಆಫ್‌ ಕಸ್ಟಮ್ಸ್ ಶುಕ್ರವಾರ ಹೇಳಿದೆ.

‘ಚೀನಾ ಕೈಗೊಂಡಿರುವ ಕ್ರಮ ಕಾನೂನುಬದ್ಧವಾಗಿಯೇ ಇದೆ. ಗೋಮಾಂಸದಲ್ಲಿ ಮದ್ದಿನ ಅಂಶ ಹೇಗೆ ಸೇರ್ಪಡೆಯಾಗಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ರಾಸುಗಳಿಗೆ ನೀಡುವ ಆಹಾರದಲ್ಲಿ ಅದು ಸ್ವಾಭಾವಿಕವಾಗಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ. ಈ ಸಂಬಂಧ ಬೀಜಿಂಗ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈಗ ಉದ್ಭವಿಸಿರುವ ಬಿಕ್ಕಟ್ಟನ್ನು ಶೀಘ್ರವೇ ಶಮನಗೊಳಿಸಲು ಪ್ರಯತ್ನಿಸುತ್ತೇವೆ’ ಎಂದು ಆಸ್ಟ್ರೇಲಿಯಾದ ಕೃಷಿ ಸಚಿವ ಡೇವಿಡ್‌ ಲಿಟಲ್‌ಪ್ರೌಡ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.