ADVERTISEMENT

ಕೋವಿಡ್‌–19 ಮಾಹಿತಿ ಮುಚ್ಚಿಟ್ಟ ಚೀನಾ: ಅಮೆರಿಕ ಆರೋಪ

ಪಿಟಿಐ
Published 9 ಮೇ 2020, 15:09 IST
Last Updated 9 ಮೇ 2020, 15:09 IST
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ    

ವಾಷಿಂಗ್ಟನ್: ಕೋವಿಡ್‌–19 ಕುರಿತ ಅಂಕಿ–ಅಂಶವನ್ನು ಮರೆಮಾಚುವುದನ್ನು ಚೀನಾ ಮುಂದುವರಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಆರೋಪಿಸಿದ್ದಾರೆ.

‘ಚೀನಾದ ವುಹಾನ್ ನಗರದಲ್ಲಿನ ಪ್ರಯೋಗಾಲಯದಿಂದಲೇ ಅಪಾಯ ಸೃಷ್ಟಿಯಾಗಿತ್ತು. ಅಲ್ಲಿಂದಲೇ ವೈರಸ್ ಹೊರಹೊಮ್ಮಿರಬಹುದು. ಈ ಬಗ್ಗೆ ಹಲವು ಗಮನಾರ್ಹ ಪುರಾವೆಗಳು ದೊರೆಯುತ್ತಿವೆ. ಚೀನಾ ಈ ಬಗ್ಗೆ ಸಮಗ್ರವಾಗಿ ಉತ್ತರ ಕೊಡಬೇಕಾಗಿದೆ’ ಎಂದು ಪಾಂಪಿಯೊ ತಿಳಿಸಿದ್ದಾರೆ.

‘ವೈರಸ್‌ನ ಕುರಿತು ಎಲ್ಲಾ ಮಾಹಿತಿಯನ್ನು ಹೊಂದಿರುವ ಚೀನಾ 120ಕ್ಕೂ ಹೆಚ್ಚು ದಿನಗಳ ಬಳಿಕವೂ ಅಮೆರಿಕ ಸೇರಿದಂತೆ ವಿಶ್ವದ ಅತ್ಯುತ್ತಮ ವಿಜ್ಞಾನಿಗಳಿಂದ ದತ್ತಾಂಶವನ್ನು ಮುಚ್ಚಿಟ್ಟಿದೆ’ ಎಂದೂ ಅವರು ದೂರಿದರು.

ADVERTISEMENT

‘ನಮ್ಮ ಆರ್ಥಿಕ ಸ್ಥಿತಿ ಬಿಕ್ಕಟ್ಟಿನಲ್ಲಿದೆ. ಚೀನಾ ಕೋವಿಡ್‌–19 ಕುರಿತು ತನ್ನ ಮಾಹಿತಿ ಮತ್ತು ಅಂಕಿ-ಅಂಶವನ್ನು ಮುಚ್ಚಿಟ್ಟಿದ್ದರ ಫಲವಿದು. ಆದರೆ, ಚೀನಾದಿಂದ ಮಾತ್ರ ನಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.