ADVERTISEMENT

ಬೈಡನ್‌ಗೆ ಅಭಿನಂದನೆ ಸಲ್ಲಿಸಲು ಚೀನಾ ನಕಾರ

ಗೆಲುವಿಗೆ ಕಾನೂನಿನ ಅನುಮೋದನೆ ಬೇಕು ಎಂದ ಚೀನಾ

ಪಿಟಿಐ
Published 9 ನವೆಂಬರ್ 2020, 12:37 IST
Last Updated 9 ನವೆಂಬರ್ 2020, 12:37 IST
ಜೋ ಬೈಡನ್
ಜೋ ಬೈಡನ್   

ಬೀಜಿಂಗ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಅಭಿನಂದಿಸಲು ಚೀನಾ ನಿರಾಕರಿಸಿದೆ.

ಅಮೆರಿಕದ ಅಧ್ಯಕ್ಷರ ಚುನಾವಣೆಯ ಫಲಿತಾಂಶವನ್ನು ಆ ದೇಶದ ಕಾನೂನು ಮತ್ತು ಕಾರ್ಯವಿಧಾನಗಳಿಂದ ನಿರ್ಧರಿಸಬೇಕು ಎಂದೂ ಚೀನಾ ಹೇಳಿದೆ.

ಬೈಡನ್ ಅವರ ಆಯ್ಕೆಗೆ ಅಭಿನಂದನೆ ಸಲ್ಲಿಸದ ರಷ್ಯಾ, ಮೆಕ್ಸಿಕೊ ಸೇರಿದಂತೆ ಇತರ ಪ್ರಮಖ ದೇಶಗಳ ಪೈಕಿ ಚೀನಾ ಕೂಡಾ ಇದೆ. ಬೈಡನ್ ಮತ್ತು ಕಮಲಾ ಹ್ಯಾರಿಸ್ ಆಯ್ಕೆಗೆ ಇನ್ನೂ ಅಭಿನಂದನೆ ಸಲ್ಲಿಸದ ಕುರಿತು ಮಾಧ್ಯಮಗಳು ಚೀನಾದ ಗಮನ ಸೆಳೆದಿವೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಪಿನ್, ‘ಚುನಾವಣೆಯಲ್ಲಿ ಬೈಡನ್ ಗೆದ್ದಿರುವುದಾಗಿ ಘೋಷಿಸಲಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಆದರೆ, ಅಮೆರಿಕದ ಕಾನೂನು ಮತ್ತು ಕಾರ್ಯವಿಧಾನಗಳಿಗೆ ಅನುಸಾರವಾಗಿ ಚುನಾವಣೆಯ ಫಲಿತಾಂಶವನ್ನು ಘೋಷಿಸಲಾಗುತ್ತದೆ ಎನ್ನುವುದು ನಮ್ಮ ತಿಳಿವಳಿಕೆ’ ಎಂದಿದ್ದಾರೆ.

ಬೈಡನ್ ಅವರ ಗೆಲುವನ್ನು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಇನ್ನೂ ಒಪ್ಪಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.