ADVERTISEMENT

ತೈವಾನ್‌ ತನ್ನ ಸುಪರ್ದಿಗೆ ಬರುವುದು ಅನಿವಾರ್ಯ: ಚೀನಾ

ಏಜೆನ್ಸೀಸ್
Published 21 ಸೆಪ್ಟೆಂಬರ್ 2022, 12:54 IST
Last Updated 21 ಸೆಪ್ಟೆಂಬರ್ 2022, 12:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಸ್ವಯಂ ಆಡಳಿತದ ದ್ವೀಪ ರಾಷ್ಟ್ರ ತೈವಾನ್‌ ತನ್ನ ಸುಪರ್ದಿಗೆ ಬರುವುದು ಅನಿವಾರ್ಯ. ಆದರೆ ಶಾಂತಿಯ ಮಾರ್ಗದ ಮೂಲಕ ಇದನ್ನು ಸಾಧಿಸುತ್ತೇವೆ ಎಂದು ಚೀನಾ ಬುಧವಾರ ಹೇಳಿದೆ.

ಚೀನಾ ಅತಿಕ್ರಮಣಕ್ಕೆ ಮುಂದಾದರೆ ಅಮೆರಿಕವು ತೈವಾನ್‌ ಪರ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ ಹಾಗೂ ಅಮೆರಿಕ ಮತ್ತು ಕೆನಡಾ ಯುದ್ಧನೌಕೆಗಳು ತೈವಾನ್ ಜಲಸಂಧಿಯಲ್ಲಿ ಸಂಚರಿಸಿದ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.

ಕಳೆದ ತಿಂಗಳು ತೈವಾನ್‌ ಸಮೀಪದ ಚೀನಾ ಕ್ಷಿಪಣಿ ಉಡಾವಣೆ ಮಾಡಿದ ನಂತರ ಉಭಯ ದೇಶಗಳ ನಡುವಿನ ಬಿಕ್ಕಟ್ಟು ತೀವ್ರಗೊಂಡಿದ್ದು, ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.