ADVERTISEMENT

ತ್ರಿಪಕ್ಷೀಯ ಸಭೆ ಚೀನಾ ಮೌನ

ಪಿಟಿಐ
Published 20 ಜೂನ್ 2018, 16:35 IST
Last Updated 20 ಜೂನ್ 2018, 16:35 IST
ಲುವೊ ಝೋಂಹೈ
ಲುವೊ ಝೋಂಹೈ   

ಬೀಜಿಂಗ್:ಭಾರತ–ಚೀನಾ–ಪಾಕಿಸ್ತಾನ ನಡುವೆ ತ್ರಿಪಕ್ಷೀಯ ಸಹಕಾರ, ಸಭೆ ಏರ್ಪಡಬೇಕಿದೆ ಎಂದಿದ್ದ ಭಾರತದಲ್ಲಿರುವ ಚೀನಾದ ರಾಯಭಾರಿ ಹೇಳಿಕೆಯಿಂದ ಚೀನಾ ಅಂತರ ಕಾಯ್ದುಕೊಂಡಿದೆ.ಆದರೆ ಪರಸ್ಪರ ನಂಬಿಕೆ ಮೂಡಲು ಭಾರತ ಹಾಗೂ ಪಾಕಿಸ್ತಾನದ ಜೊತೆ ಮಾತುಕತೆಯನ್ನು ಬಲಗೊಳಿಸುವ ಅಗತ್ಯವಿದೆ ಎಂಬುದನ್ನು ಚೀನಾ ಒತ್ತಿ ಹೇಳಿದೆ.

ಭಾರತದಲ್ಲಿರುವ ಚೀನಾದ ರಾಯಭಾರಿ ಲುವೊ ಝೋಂಹೈ ಅವರ ಹೇಳಿಕೆಯಿಂದ ಚೀನಾ ಅಂತರ ಕಾಯ್ದುಕೊಳ್ಳುತ್ತಿರುವುದು ಇದು ಎರಡನೇ ಬಾರಿ.

ಶಾಂಘೈ ಸಹಕಾರ ಸಂಘಟನೆಯ ಅಡಿಯಲ್ಲಿ ತ್ರಿಪಕ್ಷೀಯ ಸಭೆ ನಡೆಸುವ ಬಗ್ಗೆ ರಾಯಭಾರಿ ಲುವೊ ಅವರು ಒಲವುವ್ಯಕ್ತಪಡಿಸಿದ್ದರು. ಲುವೊ ಅವರ ಅಭಿಪ್ರಾಯ ಕುರಿತು ಕೇಳಿದ ಪ್ರಶ್ನೆಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗೆಂಜ್ ಶುಂಕ್ ಅವರು ‘ಭಾರತ, ಪಾಕಿಸ್ತಾನಗಳೆರಡೂ ಚೀನಾದ ಮಿತ್ರದೇಶಗಳು. ಪ್ರಾದೇಶಿಕ ಸ್ಥಿರತೆ, ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನೆರೆಯ ದೇಶಗಳ ಜೊತೆ ಚೀನಾ ಸದಾ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.