ADVERTISEMENT

ಚೀನಾ ಡ್ರೋನ್ ಹಾರಟ ಪ್ರಚೋದನಾಕಾರಿ: ತೈವಾನ್ ಆಕ್ರೋಶ

ದ್ವೀಪದ ಮೇಲೆ ಡ್ರೋನ್ ಸಂಚಾರ: ತೈವಾನ್ ಆಕ್ರೋಶ

ಪಿಟಿಐ
Published 17 ಜನವರಿ 2026, 15:36 IST
Last Updated 17 ಜನವರಿ 2026, 15:36 IST
<div class="paragraphs"><p>ಡ್ರೋನ್</p></div>

ಡ್ರೋನ್

   

ತೈಪೆ: ತನ್ನ ನಿಯಂತ್ರಣದಲ್ಲಿರುವ ದ್ವೀಪವೊಂದರ ಮೇಲೆ ಚೀನಾದ ಕಣ್ಗಾವಲು ಡ್ರೋನ್‌ವೊಂದು ಶನಿವಾರ ಹಾರಾಟ ನಡೆಸಿದೆ ಎಂದು ಹೇಳಿರುವ ತೈವಾನ್‌ ರಕ್ಷಣಾ ಸಚಿವಾಲಯ, ‘ಇದು ಪ್ರಚೋದನಕಾರಿ ಮತ್ತು ಬೇಜವಾಬ್ದಾರಿಯುತ ನಡೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಪ್ರಟಸ್‌ ದ್ವೀಪದ ಬಳಿ ಚೀನಾದ ಡ್ರೋನ್‌ ಎಂಟು ನಿಮಿಷ ಹಾರಾಟ ನಡೆಸಿದೆ. ಅಂತರರಾಷ್ಟ್ರೀಯ ಚಾನೆಲ್‌ಗಳ ಮೂಲಕ ನಾವು ಎಚ್ಚರಿಕೆ ನೀಡಿದ ಬಳಿಕ ಅದು ಹೊರಟುಹೋಯಿತು’ ಎಂದು ತೈವಾನ್ ತಿಳಿಸಿದೆ.

ADVERTISEMENT

‘ಚೀನಾದ ನಡೆಯು ಖಂಡನಾರ್ಹ. ಇದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ. ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೂ ಆಗಿದೆ’ ಎಂದೂ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಸೇನೆಯ ವಕ್ತಾರರು, ‘ತರಬೇತಿ ಉದ್ದೇಶದಿಂದ ಡ್ರೋನ್‌ಗಳು ಹಾರಾಟ ನಡೆಸಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.