ADVERTISEMENT

ಚೀನಾ ಈಸ್ಟರ್ನ್ ಏರ್‌ಲೈನ್ಸ್‌: ನ.9ರಿಂದ ಶಾಂಘೈ–ದೆಹಲಿ ವಿಮಾನ ಸಂಚಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 14:30 IST
Last Updated 18 ಅಕ್ಟೋಬರ್ 2025, 14:30 IST
   

ಬೀಜಿಂಗ್: ಚೀನಾ ಈಸ್ಟರ್ನ್ ಏರ್‌ಲೈನ್ಸ್‌ ಸಂಸ್ಥೆಯು ನವೆಂಬರ್‌ 9ರಿಂದ ಶಾಂಘೈ–ನವದೆಹಲಿ ನಡುವೆ ವಿಮಾನ ಸಂಚಾರ ಪುನರಾರಂಭಿಸಲು ನಿರ್ಧರಿಸಿದೆ. ಸಂಸ್ಥೆಯ ಆನ್‌ಲೈನ್‌ ಟಿಕೆಟ್‌ ಮಾರಾಟ ವೇದಿಕೆಯು ಈ ಮಾಹಿತಿಯನ್ನು ಒದಗಿಸಿದೆ. 

ಭಾರತ–ಚೀನಾ ನಡುವೆ ನೇರ ವಿಮಾನ ಸಂಚಾರ ಮತ್ತೆ ಆರಂಭಗೊಳ್ಳಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು. 

ಕೋಲ್ಕತ್ತದಿಂದ ಚೀನಾದ ಗುವಾಂಗ್‌ಝೌ ನಗರಕ್ಕೆ ಅಕ್ಟೋಬರ್‌ 26ರಿಂದ ನೇರ ವಿಮಾನ ಸಂಚಾರವನ್ನು
ಪುನರಾರಂಭಿಸುವುದಾಗಿ ಭಾರತದ ವಿಮಾನಯಾನ ಸಂಸ್ಥೆ ಇಂಡಿಗೊ ಈಗಾಗಲೇ ಹೇಳಿದೆ.

ADVERTISEMENT

ಕೋವಿಡ್‌ ಹಾಗೂ ಅದರ ಬೆನ್ನಲ್ಲೇ ಪೂರ್ವ ಲಡಾಖ್‌ನ ಗಡಿ ಸಮಸ್ಯೆ ಉದ್ಭವವಾದ್ದರಿಂದ ಭಾರತ–ಚೀನಾ ನೇರ ವಿಮಾನ ಸಂಚಾವ ಸ್ಥಗಿತಗೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.