ADVERTISEMENT

ವೀಸಾ ಮುಕ್ತ ಪ್ರವೇಶ;74ದೇಶಗಳಿಗೆ ವಿಸ್ತರಣೆ: ಪ್ರವಾಸಿಗರನ್ನು ಸೆಳೆಯಲು ಚೀನಾ ಕ್ರಮ

ಏಜೆನ್ಸೀಸ್
Published 8 ಜುಲೈ 2025, 13:46 IST
Last Updated 8 ಜುಲೈ 2025, 13:46 IST
ಚೀನಾದ ರಾಷ್ಟ್ರಧ್ವಜ–ಎಎಫ್‌ಪಿ ಚಿತ್ರ
ಚೀನಾದ ರಾಷ್ಟ್ರಧ್ವಜ–ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ವೀಸಾ ನೀತಿಯನ್ನು ಸಡಿಲಗೊಳಿಸಿದ ಬಳಿಕ ಚೀನಾಕ್ಕೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಏರುಗತಿ ದಾಖಲಿಸಿದೆ. ಹೀಗಾಗಿ, ಯಾವುದೇ ವೀಸಾ ಇಲ್ಲದೇ, 30 ದಿನಗಳ ತನಕ ಚೀನಾಕ್ಕೆ ಭೇಟಿ ನೀಡುವ ಅವಕಾಶವನ್ನು 74 ದೇಶಗಳ ನಾಗರಿಕರಿಗೆ ಕಲ್ಪಿಸಿ ಚೀನಾ ಕ್ರಮ ಕೈಗೊಂಡಿದೆ.

‘ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರವು ವೀಸಾ ಮುಕ್ತ ಪ್ರವೇಶಾತಿಯನ್ನು ನಿಧಾನವಾಗಿ ಹೆಚ್ಚಿಸುತ್ತಿದೆ. 2024ರಲ್ಲಿ ವೀಸಾ ಇಲ್ಲದೆಯೇ, 2 ಕೋಟಿ ವಿದೇಶಿ ಪ್ರವಾಸಿಗರು ಚೀನಾಕ್ಕೆ ಭೇಟಿ ನೀಡಿದ್ದರು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ, ದ್ವಿಗುಣಗೊಂಡಿದೆ’ ಎಂದು ರಾಷ್ಟ್ರೀಯ ವಲಸೆ ಆಡಳಿತ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

‘ವೀಸಾಕ್ಕೆ ಅರ್ಜಿ ಸಲ್ಲಿಸಿ, ಪ್ರಕ್ರಿಯೆ ಪೂರೈಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಸರ್ಕಾರದ ನಿರ್ಧಾರದಿಂದ ಜನರಿಗೆ ಸಾಕಷ್ಟು ನೆರವಾಗಿದೆ’ ಎಂದು ಜಾರ್ಜಿಯಾದಿಂದ ಬಂದಿದ್ದ ಜಾರ್ಜಿ ಶವಾಡ್ಜೆ ತಿಳಿಸಿದರು.

ADVERTISEMENT

ಬೀಜಿಂಗ್‌ನಲ್ಲಿರುವ ‘ಟೆಂಪಲ್‌ ಆಫ್‌ ಹೆವನ್‌’ಗೆ ಅವರು ಇತ್ತೀಚಿಗೆ ಭೇಟಿ ನೀಡಿದ್ದರು.

ಸರ್ಕಾರದ ಈ ನಿರ್ಧಾರದಿಂದ ಹಲವು ಪ್ರವಾಸಿ ತಾಣಗಳು ಸ್ಥಳೀಯ ಪ್ರವಾಸಿಗರಿಗಿಂತಲೂ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.