ಬೀಜಿಂಗ್:ಭಾರತೀಯ ಸೇನೆ ತನ್ನ ಯೋಧನನ್ನು ಶೀಘ್ರವೇ ಬಿಡುಗಡೆ ಮಾಡುವ ವಿಶ್ವಾಸ ಇದೆ ಎಂದು ಚೀನಾ ಮಂಗಳವಾರ ಹೇಳಿದೆ.
ಪೂರ್ವ ಲಡಾಖ್‌ನ ಡೆಮ್‌ಚೋಕ್ ಸೆಕ್ಟರ್‌ನಲ್ಲಿ ದಾರಿ ತಪ್ಪಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿ ಬಂದಿದ್ದ ಚೀನಾದ ವಾಂಗ್ ಯ ಲಾಂಗ್ ಎಂಬ ಯೋಧನನ್ನು ಭಾರತೀಯ ಸೇನೆ ಸೋಮವಾರ ವಶಕ್ಕೆ ಪಡೆದಿತ್ತು.
‘ಮಾರ್ಗಸೂಚಿ ಅನ್ವಯ ಎಲ್ಲ ಪ್ರಕ್ರಿಯೆಯು ಮುಗಿದ ಬಳಿಕ ಚೀನಾದ ಯೋಧನನ್ನು ಚೌಶುಲ್–ಮೊಲ್ಡೊ ಪ್ರದೇಶದಲ್ಲಿ ಚೀನಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು’ ಎಂದೂ ಸೇನೆ ತಿಳಿಸಿತ್ತು.
‘ಗಡಿ ಭಾಗದಲ್ಲಿನ ದನಗಾಹಿಗಳ ಮನವಿಯಂತೆ ಅವರಿಗೆ ಸೇರಿದ ಯಾಕ್ ಅನ್ನು ಹುಡುಕಿಕೊಡುವ ಸಂದರ್ಭದಲ್ಲಿ ಯೋಧ ನಾಪತ್ತೆಯಾಗಿದ್ದ. ತನ್ನ ವಶಕ್ಕೆ ಪಡೆದಿರುವ ಭಾರತೀಯ ಸೇನೆ ಶೀಘ್ರವೇ ನಮ್ಮ ಯೋಧನನ್ನು ಬಿಡುಗಡೆ ಮಾಡುವ ವಿಶ್ವಾಸ ಹೊಂದಿದ್ದೇವೆ’ ಎಂದುಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮ ಥೇಟರ್ ಕಮಾಂಡ್‌ನ ವಕ್ತಾರ ಜಾಂಗ್ ಶುಯಿಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.