
ಸಾಂದರ್ಭಿಕ ಚಿತ್ರ
ಬೀಜಿಂಗ್: ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಅನಿಲ ‘ಡೈಕ್ಲೋರೋಸಿಲೇನ್’ ಆಮದು ಕುರಿತು ಚೀನಾ ಬುಧವಾರ ತನಿಖೆ ಆರಂಭಿಸಿದ್ದು, ಜಪಾನ್ ಹಾಗೂ ಚೀನಾ ನಡುವಿನ ವ್ಯಾಪಾರ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.
ಜಪಾನ್ ಸೇನೆಯು ಬಳಸಬಹುದಾದ ದ್ವಿಬಳಕೆಯ ವಸ್ತುಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದ ಮರುದಿನವೇ ಈ ಕ್ರಮ ಕೈಗೊಂಡಿದೆ.
2022 ಮತ್ತು 2024ರ ನಡುವೆ ಜಪಾನ್‌ನಿಂದ ಆಮದು ಮಾಡಿಕೊಂಡ ಡೈಕ್ಲೋರೋಸಿಲೇನ್ ಬೆಲೆಯು ಶೇ 31ರಷ್ಟು ಕಡಿಮೆಯಾಗಿದೆ ಎಂದು ದೇಶೀಯ ಉದ್ಯಮ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಈ ತನಿಖೆ ಆರಂಭಿಸಲಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಜಪಾನ್‌ನಿಂದ ಆಮದು ಮಾಡಿಕೊಂಡ ಉತ್ಪನ್ನಗಳನ್ನು ಎಸೆಯುವುದರಿಂದ ನಮ್ಮ ದೇಶೀಯ ಉದ್ಯಮದ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ಹಾನಿಯಾಗಿದೆ’ ಎಂದು ಸಚಿವಾಲಯ ಹೇಳಿದೆ.
‘ದ್ವೀಪ ರಾಷ್ಟ್ರ ತೈವಾನ್ ವಿರುದ್ಧ ಚೀನಾ ಕ್ರಮ ಕೈಗೊಂಡರೆ ತನ್ನ ಸೇನೆ ಮಧ್ಯಪ್ರವೇಶಿಸಲಿದೆ’ ಎಂದು ಜಪಾನ್‌ನ ಹೊಸ ಪ್ರಧಾನಿ ಸನೇ ತಕೈಚಿ ಅವರು ವರ್ಷಾಂತ್ಯದಲ್ಲಿ ಹೇಳಿದ್ದರು. ಹೀಗಾಗಿ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.