ADVERTISEMENT

ದೇಶೀಯ ನಿರ್ಮಿತ ವಿಮಾನ ವಾಹಕ ನೌಕೆಗೆ ಚಾಲನೆ ನೀಡಿದ ಚೀನಾ

ಪಿಟಿಐ
Published 17 ಜೂನ್ 2022, 13:14 IST
Last Updated 17 ಜೂನ್ 2022, 13:14 IST
ಚೀನಾವು ಶುಕ್ರವಾರ ಫುಜಿಯನ್‌ ಹೆಸರಿನ ವಿಮಾನವಾಹಕ ಯುದ್ಧನೌಕೆಗೆ ಚಾಲನೆ ನೀಡಿತು –ಎಎಫ್‌ಪಿ ಚಿತ್ರ
ಚೀನಾವು ಶುಕ್ರವಾರ ಫುಜಿಯನ್‌ ಹೆಸರಿನ ವಿಮಾನವಾಹಕ ಯುದ್ಧನೌಕೆಗೆ ಚಾಲನೆ ನೀಡಿತು –ಎಎಫ್‌ಪಿ ಚಿತ್ರ   

ಬೀಜಿಂಗ್‌: ಪೂರ್ಣ ಪ್ರಮಾಣದಲ್ಲಿ ದೇಶೀಯವಾಗಿ ನಿರ್ಮಿಸಿರುವ ಅತ್ಯಾಧುನಿಕ ‘ಫುಜಿಯನ್’ ಹೆಸರಿನ ಮೂರನೇ ಬೃಹತ್‌ ವಿಮಾನವಾಹಕ ಯುದ್ಧನೌಕೆಗೆ ಶಾಂಘೈನ ನೌಕಾನೆಲೆಯಲ್ಲಿ ಚೀನಾ ಶುಕ್ರವಾರ ಹಸಿರು ನಿಶಾನೆ ನೀಡಿದೆ.

ಈ ಕುರಿತು ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದ್ದು, ಈ ವಿಮಾನವಾಹಕ ಯುದ್ಧ ನೌಕೆಯನ್ನು ಚೀನಾ ಸ್ಟೇಟ್‌ ಶಿಪ್‌ಬಿಲ್ಡಿಂಗ್‌ ಕಾರ್ಪೋರೇಷನ್‌ ಲಿಮಿಟೆಡ್‌ ನಿರ್ಮಿಸಿದೆ ಎಂದು ಹೇಳಿದೆ.

ಚೀನಾ ಸುಮಾರು ಐದು ವಿಮಾನವಾಹಕ ಯುದ್ಧ ನೌಕೆಗಳನ್ನು ಹೊಂದಲು ಯೋಜಿಸಿದೆ. ಚೀನಾ ನಿರ್ಮಿಸಲು ಯೋಜಿಸಿರುವ ಮುಂದಿನ ವಿಮಾನವಾಹಕ ಯುದ್ಧನೌಕೆಯು ಪರಮಾಣು ಚಾಲಿತವಾಗಿರಬಹುದೆಂಬ ನಿರೀಕ್ಷೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.