ADVERTISEMENT

‘ದೀದಿ’ ಸಂಸ್ಥೆಯ 25 ಆಪ್ಲಿಕೇಷನ್‌ಗಳನ್ನು ತೆಗೆದು ಹಾಕಲು ಚೀನಾ ಸೂಚನೆ

ಏಜೆನ್ಸೀಸ್
Published 10 ಜುಲೈ 2021, 9:39 IST
Last Updated 10 ಜುಲೈ 2021, 9:39 IST
‍ಪ್ರಾತಿನಿಧಿಕ ಚಿತ್ರ
‍ಪ್ರಾತಿನಿಧಿಕ ಚಿತ್ರ   

ಬಿಜೀಂಗ್‌: ‘ದೀದಿ ಗ್ಲೋಬಲ್‌’ ಮಾಲೀಕತ್ವದ 25 ಆಪ್ಲಿಕೇಷನ್‌ಗಳನ್ನು ಆ್ಯಪ್‌ ಸ್ಟೋರ್‌ನಿಂದ ತೆಗೆದು ಹಾಕುವಂತೆ ಚೀನಾ ನಿರ್ದೇಶಿಸಿದೆ.

ಬಳಕೆದಾರರ ಖಾಸಗಿ ಮಾಹಿತಿ ಸಂಗ್ರಹಿಸುವ ಮೂಲಕ ಸಂಸ್ಥೆಯು ನಿಯಮ ಉಲ್ಲಂಘಿಸಿದೆ ಎಂಬ ಆರೋಪದಡಿ ಈ ಆದೇಶವನ್ನು ಹೊರಡಿಸಲಾಗಿದೆ.

ಚೀನಾದ ‘ಸೈಬರ್‌ಸ್ಪೇಸ್‌ ಆಡ್ಮಿನಿಸ್ಟ್ರೇಷನ್‌’ ಕಳೆದ ಭಾನುವಾರ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ದೀದಿ ಸಂಸ್ಥೆಯ ಪ್ರಮುಖ ಆಪ್ಲಿಕೇಷನ್‌ ಅನ್ನು ಆ್ಯಪ್‌ಸ್ಟೋರ್‌ನಿಂದ ತೆಗೆದು ಹಾಕಿತ್ತು.

ADVERTISEMENT

ಇದೀಗ ದೀದಿ ಎಂಟರ್‌ಪ್ರೈಸಸ್ ಸೇರಿದಂತೆ ಒಟ್ಟು 25 ಆ್ಯಪ್‌ಗಳನ್ನು ತೆಗೆದು ಹಾಕುವಂತೆ ಆಡಳಿತವು ಆದೇಶಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಲುದೀದಿ ಸಂಸ್ಥೆಯ ವಕ್ತಾರರು ನಿರಾಕರಿಸಿದ್ದಾರೆ.

ವಿದೇಶಗಳಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಬಗ್ಗೆ ಮೇಲ್ವಿಚಾರಣೆ ನಡೆಸುವುದಾಗಿ ಚೀನಾದ ಅಧಿಕಾರಿಗಳು ಈ ವಾರದ ಆರಂಭದಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ಹೊಸ ಕ್ರಮದಡಿ ದತ್ತಾಂಶ ಸುರಕ್ಷತೆ, ಗಡಿಯಾಚೆಗಿನ ದತ್ತಾಂಶ ಹರಿವುಗಳ ನಿಯಂತ್ರಣ ಮತ್ತು ಗೌಪ್ಯ ದತ್ತಾಂಶಗಳ ನಿರ್ವಹಣೆಯನ್ನು ಸುಧಾರಿಸಲಾಗುವುದು.

ದೀದಿ ಸಂಸ್ಥೆಯು ಮಾಹಿತಿ ಸಂಗ್ರಹದ ವಿಧಾನ ಮತ್ತು ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ಹೊಸ ಗ್ರಾಹಕರನ್ನು ಸ್ವೀಕರಿಸದಂತೆ ಎಂದು ದೀದಿ ಸಂಸ್ಥೆಗೆ ಸೈಬರ್‌ಸ್ಪೇಸ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.