ADVERTISEMENT

ಚೀನಾ: 2025ರ ವೇಳೆಗೆ ಜನಸಂಖ್ಯೆ ಬೆಳವಣಿಗೆ ದರ ಕುಸಿತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 15:27 IST
Last Updated 25 ಜುಲೈ 2022, 15:27 IST
   

ಬೀಜಿಂಗ್: ಚೀನಾದಲ್ಲಿ ಕಡಿಮೆ ಆಗುತ್ತಿರುವ ಜನಸಂಖ್ಯೆಯು 2025ರ ವೇಳೆಗೆ ನಕಾರಾತ್ಮಕ ಬೆಳವಣಿಗೆ ಮುಟ್ಟಲಿದ್ದು, ಈ ಕುಸಿತ ಶತಮಾನಕ್ಕೂ ಹೆಚ್ಚು ಕಾಲ ಮುಂದುವರಿಯಬಹುದು ಎಂದು ಮಾಧ್ಯಮ ವರದಿ ಸೋಮವಾರ ಹೇಳಿದೆ.

ಚೀನಾ ಪಾಪ್ಯುಲೇಶನ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮೇಳನದಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗದ ಜನಸಂಖ್ಯೆ ಮತ್ತು ಕುಟುಂಬ ವ್ಯವಹಾರಗಳ ಮುಖ್ಯಸ್ಥ ಯಾಂಗ್ ವೆನ್‌ಜುವಾಂಗ್ ಮಾತನಾಡಿ,ಜನಸಂಖ್ಯೆಯ ಒಟ್ಟಾರೆ ಗುಣಮಟ್ಟ ಸುಧಾರಿಸುವ ಮತ್ತು ಸಮಸ್ಯೆ ಪರಿಹರಿಸಲು ಆರ್ಥಿಕ ಅಭಿವೃದ್ಧಿ ಯೋಜನೆ ಬದಲಾಯಿಸುವ ಅಗತ್ಯವನ್ನು ಇದು ಎತ್ತಿ ತೋರಿಸಿದೆ ಎಂದರು.

ಒಟ್ಟು ಜನಸಂಖ್ಯೆಯ ಬೆಳವಣಿಗೆ ದರ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪ್ರಸ್ತುತ 14ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲೇ (2021-25) ನಕಾರಾತ್ಮಕ ಬೆಳವಣಿಗೆಯತ್ತ ದೇಶ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.