ADVERTISEMENT

ಉಗ್ರ ಶಾಹಿದ್ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಚೀನಾ ಅಡ್ಡಿ

ಪಿಟಿಐ
Published 19 ಅಕ್ಟೋಬರ್ 2022, 5:55 IST
Last Updated 19 ಅಕ್ಟೋಬರ್ 2022, 5:55 IST
   

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯ್ಯಬಾದ ಉಗ್ರ ಶಾಹಿದ್ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಮಾಡಿದ ಪ್ರಸ್ತಾಪವನ್ನು ಚೀನಾ ತಡೆಹಿಡಿದಿದೆ,

ಕೆಲ ತಿಂಗಳುಗಳಿಂದ ವಿಶ್ವ ಸಂಸ್ಥೆಯಲ್ಲಿ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿರುವ ನಾಲ್ಕನೇ ನಿದರ್ಶನ ಇದಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖೈದಾ ಮೇಲಿನ ನಿರ್ಬಂಧಗಳ ಸಮಿತಿಯ ನಿಯಮದಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತ ಮತ್ತು ಅಮೆರಿಕದ ಪ್ರಸ್ತಾಪಕ್ಕೆ ಚೀನಾ ತಡೆಯೊಡ್ಡಿದೆ.

ADVERTISEMENT

2016ರ ಡಿಸೆಂಬರ್‌ನಲ್ಲಿ ಅಮೆರಿಕದ ಖಜಾನೆ ಇಲಾಖೆ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು.

ಈತ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್‌ನ ಆಪ್ತನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.