ADVERTISEMENT

ಚೀನಾ: ಕಳೆದ 24 ಗಂಟೆಗಳಲ್ಲಿ 49 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದೃಢ

ಏಜೆನ್ಸೀಸ್
Published 2 ಆಗಸ್ಟ್ 2020, 7:27 IST
Last Updated 2 ಆಗಸ್ಟ್ 2020, 7:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 49 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದೇ ವೇಳೆ 14 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.

49 ಪ್ರಕರಣಗಳ ಪೈಕಿ 33 ಪ್ರಕರಣಗಳು ಸ್ಥಳೀಯವಾಗಿದ್ದು, ಇನ್ನುಳಿದವು ಹೊರಗಿನಿಂದ ಬಂದವುಗಳಾಗಿವೆ.

ಆಯೋಗದ ಪ್ರಕಾರ, ಸ್ಥಳೀಯ ಪ್ರಕರಣಗಳಲ್ಲಿ ಹೆಚ್ಚಿನವು ವಾಯುವ್ಯ ಚೀನಾದ ಸ್ವಾಯತ್ತ ಪ್ರದೇಶವಾದ ಕ್ಸಿನ್‌ಜಿಯಾಂಗ್‌ನಲ್ಲಿ ದಾಖಲಾಗಿದ್ದು, ಅಲ್ಲಿ ಹೊಸದಾಗಿ ಸೋಂಕಿತ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ.

ADVERTISEMENT

ಚೀನಾದಲ್ಲಿ ಈವರೆಗೂ 84,385 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸಾವಿನ ಸಂಖ್ಯೆ 4,634 ಆಗಿದೆ. ಇದುವರೆಗೂ 79,003 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊರಗಿನಿಂದ ಬಂದ 2,085 ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಲಕ್ಷಣರಹಿತ 20 ಹೊಸ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂಬತ್ತು ಹೊರಗಿನಿಂದ ಬಂದವುಗಳೇ ಆಗಿವೆ. ಈವರೆಗೂ 250ಕ್ಕೂ ಹೆಚ್ಚು ಪ್ರಕರಣಗಳು ಲಕ್ಷಣರಹಿತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.