ADVERTISEMENT

ಚೀನಾ: ಕಳೆದ 24 ಗಂಟೆಗಳಲ್ಲಿ 10 ಹೊಸ ಕೋವಿಡ್ ಪ್ರಕರಣ ದೃಢ, 31 ಜನರು ಗುಣಮುಖ

ಏಜೆನ್ಸೀಸ್
Published 1 ಸೆಪ್ಟೆಂಬರ್ 2020, 3:58 IST
Last Updated 1 ಸೆಪ್ಟೆಂಬರ್ 2020, 3:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 10 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಅವೆಲ್ಲವೂ ಹೊರಗಿನಿಂದ ಬಂದವರಿಗೆ ತಗುಲಿದ್ದಾಗಿವೆ. ಇದೇ ವೇಳೆ 31 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.

ಚೀನಾದಲ್ಲಿ ಈವರೆಗೆ 85,058 ಜನರಿಗೆ ಸೋಂಕು ತಗುಲಿದ್ದು, 4,634 ಜನರುಸಾವಿಗೀಡಾಗಿದ್ದಾರೆ. ಒಟ್ಟಾರೆ 2,509 ಜನರು ಹೊರಗಿನಿಂದ ಬಂದವರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 34 ಸೋಂಕು ಲಕ್ಷಣಗಳಿಲ್ಲದ ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರೂ ಹೊರಗಿನಿಂದ ಬಂದವರಾಗಿದ್ದಾರೆ ಎಂದು ಆರೋಗ್ಯ ಆಯೋಗ ತಿಳಿಸಿದೆ.

ADVERTISEMENT

ಕೋವಿಡ್ ಸೋಂಕಿನಿಂದ ಈವರೆಗೆ 80,200 ಕ್ಕಿಂತ ಹೆಚ್ಚಿನ ಜನರು ಚೇತರಿಸಿಕೊಂಡಿದ್ದಾರೆ. 200ಕ್ಕೂ ಹೆಚ್ಚಿನ ಜನರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರವಷ್ಟೇ 17 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 24 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾನುವಾರ ಹೊರಗಿನ 9 ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು 27 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.