ADVERTISEMENT

Covid-19 | ಚೀನಾದಲ್ಲಿ 28,062 ಹೊಸ ಪ್ರಕರಣಗಳು ವರದಿ

ರಾಯಿಟರ್ಸ್
Published 6 ಡಿಸೆಂಬರ್ 2022, 1:57 IST
Last Updated 6 ಡಿಸೆಂಬರ್ 2022, 1:57 IST
   

ಶಾಂಘೈ: ಚೀನಾದಲ್ಲಿ ಕೋವಿಡ್‌–19 ದೃಢಪಟ್ಟ28,062 ಹೊಸ ಪ್ರಕರಣಗಳು ಡಿಸೆಂಬರ್ 5 ರಂದು ವರದಿಯಾಗಿವೆ. ಈ ಪೈಕಿ 5,046 ಮಂದಿಯಲ್ಲಿ ಮಾತ್ರವೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು,23,016 ಜನರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.

ಹೊಸದಾಗಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಈವರೆಗೆ ಕೋವಿಡ್‌ನಿಂದ5,235 ಸೋಂಕಿತರು ಮೃತಪಟ್ಟಿದ್ದಾರೆ.

ಡಿಸೆಂಬರ್ 4ರಂದು ಒಟ್ಟು30,014 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ4,318 ಜನರಲ್ಲಿ ಮಾತ್ರವೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.

ADVERTISEMENT

ಕೋವಿಡ್‌ ನಿಯಂತ್ರಣಕ್ಕಾಗಿ ಕೈಗೊಂಡಿದ್ದ ಕಠಿಣ ಕ್ರಮಗಳ ‍ಪೈಕಿ ಕೆಲವು ನಿಯಮಗಳನ್ನು ಚೀನಾ ಸಡಿಲಿಸಿದೆ. ಹೊಸ ತಳಿಗಳು ದುರ್ಬಲವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ತಿಂಗಳು ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಕಠಿಣ ನಿರ್ಬಂಧಗಳಿಂದ ಬೇಸತ್ತಿದ್ದ ಜನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿ, ಷಿ ಜಿನ್‌ಪಿಂಗ್‌ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಒತ್ತಡ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.