ADVERTISEMENT

ತೈವಾನ್‌ನ ಏಳು ಪ್ರಮುಖ ವ್ಯಕ್ತಿಗಳಿಗೆ ಚೀನಾ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:33 IST
Last Updated 16 ಆಗಸ್ಟ್ 2022, 15:33 IST

ಬೀಜಿಂಗ್‌:ತೈವಾನ್‌ ಸ್ವಾತಂತ್ರ್ಯದ ಪರವಿರುವ ಕಟ್ಟರ್‌ಗಳಾದ ತೈವಾನ್‌ನ ಏಳು ಮಂದಿ ಪ್ರಮುಖ ರಾಜಕೀಯ ಗಣ್ಯರು ಮತ್ತು ಅಧಿಕಾರಿಗಳಿಗೆ ಚೀನಾ ಮಂಗಳವಾರ ನಿರ್ಬಂಧ ಹೇಳಿದೆ.

ನಿರ್ಬಂಧದ ಪಟ್ಟಿಯಲ್ಲಿ ವಾಷಿಂಗ್ಟನ್‌ನಲ್ಲಿ ತೈವಾನ್ ಪ್ರತಿನಿಧಿಸುವ ಉನ್ನತ ಅಧಿಕಾರಿಯೂ ಸೇರಿದ್ದಾರೆ.ಸ್ವಯಂ ಆಡಳಿತದ ದ್ವೀಪ ತೈವಾನ್‌ಗೆ ವಿದೇಶಿ ಗಣ್ಯರು ಹೆಚ್ಚಿನ ಭೇಟಿ ನೀಡುತ್ತಿರುವುದರ ಬಗ್ಗೆ ಕಳವಳ ಹೊಂದಿರುವ ಚೀನಾ ಈ ಕ್ರಮಕೈಗೊಂಡಿದೆ.

ತೈವಾನ್‌ ಪ್ರಜಾಪ್ರಭುತ್ವ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಅಂತರರಾಷ್ಟ್ರೀಯ ಸಹಕಾರ ಮತ್ತು ಅಭಿವೃದ್ಧಿ ನಿಧಿಯ ಪ್ರಧಾನ ಕಾರ್ಯದರ್ಶಿಯವರಿಗೂ ಚೀನಾ ನಿರ್ಬಂಧ ಹೇರಿದೆ. ಚೀನಾದ ವಿರೋಧವನ್ನು ಲೆಕ್ಕಿಸದೇ ತೈವಾನ್‌ಗೆ ಅಮೆರಿಕ ಸಂಸತ್‌ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಭೇಟಿ ನೀಡಿದ್ದಕ್ಕೆ ಅಮೆರಿಕ ಮತ್ತು ತೈವಾನ್‌ನ ಪ್ರಮುಖ ಗಣ್ಯರಿಗೆಚೀನಾ ನಿರ್ಬಂಧ ಹೇರುವ ಮೂಲಕಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.