ADVERTISEMENT

ಅಮೆರಿಕ–ಜಪಾನ್‌ ಮೈತ್ರಿ ವಿರುದ್ಧ ಚೀನಾ ವಾಗ್ದಾಳಿ

ಏಜೆನ್ಸೀಸ್
Published 17 ಏಪ್ರಿಲ್ 2021, 10:21 IST
Last Updated 17 ಏಪ್ರಿಲ್ 2021, 10:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಿಜೀಂಗ್‌: ಅಮೆರಿಕ–ಜಪಾನ್‌ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿರುವ ಚೀನಾ, ‘ಇದು ವಿಭಜನೆಗೆ ಕುಮ್ಮಕ್ಕು ಪ್ರಯತ್ನವಾಗಿದೆ’ ಎಂದು ಹೇಳಿದೆ.

‘ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮೌಲ್ಯ ಹಾಗೂ ಇಂಡೊ–ಫೆಸಿಫಿಕ್ ಪ್ರದೇಶದಲ್ಲಿ ಚೀನಾದ ಚಟುವಟಿಕೆ ಕುರಿತಾಗಿ ಅಮೆರಿಕ–ಜಪಾನ್‌ ಜಂಟಿ ಹೇಳಿಕೆ ನೀಡಿದೆ. ಈ ರಾಷ್ಟ್ರಗಳು ಸಾಮಾನ್ಯ ಅಭಿವೃದ್ಧಿ ಮತ್ತು ದ್ವಿಪಕ್ಷೀಯ ಸಂಬಂಧಕ್ಕಿಂತ ಅದೆಷ್ಟೋ ಮುಂದೆ ಹೋಗಿವೆ’ ಎಂದು ಚೀನಾ ಹೇಳಿದೆ.

‘ಮುಕ್ತ ಪ್ರದೇಶ ನಿರ್ಮಾಣದ ಹೆಸರಿನಲ್ಲಿಇತರ ದೇಶಗಳನ್ನು ವಿಭಜಿಸಲು ಮತ್ತು ತಡೆ ಗೋಡೆಯನ್ನು ಕಟ್ಟಲು ಮೈತ್ರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಹಾಸ್ಯಾಸ್ಪದ’ ಎಂದು ಅಮೆರಿಕದಲ್ಲಿರುವ ಚೀನಾದ ರಾಯಭಾರಿ ತಿರುಗೇಟು ನೀಡಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್‌ ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರು ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಉಭಯ ನಾಯಕರು,ಇಂಡೊ–ಫೆಸಿಫಿಕ್‌ನಲ್ಲಿ ಶಾಂತಿ ಸ್ಥಾಪನೆ ಮತ್ತು ಹಾಂಗ್‌ಕಾಂಗ್‌, ತೈವಾನ್‌ನಲ್ಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.