ADVERTISEMENT

ಚುನಾವಣೆ ವಿಚಾರದಲ್ಲಿ ಮೂಗು ತೂರಿಸುವುದನ್ನು ಚೀನಾ ನಿಲ್ಲಿಸಬೇಕು: ತೈವಾನ್

ಏಜೆನ್ಸೀಸ್
Published 11 ಜನವರಿ 2024, 6:20 IST
Last Updated 11 ಜನವರಿ 2024, 6:20 IST
   

ತೈಪೆ: ನಮ್ಮ ಆಂತರಿಕ ವಿಚಾರದಲ್ಲಿ ಚೀನಾ 'ಪದೇ ಪದೇ ಮಧ್ಯಪ್ರವೇಶಿಸುತ್ತಿದೆ' ಎಂದು ತೈವಾನ್‌ ವಿದೇಶಾಂಗ ಸಚಿವ ಜೋಸೆಫ್‌ ವು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್‌/ಟ್ವಿಟರ್‌ ಖಾತೆಯಲ್ಲಿ ಚೀನಾ ವಿರುದ್ಧ ಕಿಡಿಕಾರಿರುವ ವು, 'ತೈವಾನ್‌ನ ಮುಂಬರುವ ಚುನಾವಣೆಯು ಜಾಗತಿಕ ಗಮನ ಸೆಳೆದಿದ್ದು, ನಮ್ಮ ಆಂತರಿಕ ವಿಚಾರದಲ್ಲಿ ಮತ್ತೆ ಮತ್ತೆ ಮಧ್ಯಪ್ರವೇಶಿಸುತ್ತಿರುವ ಚೀನಾ ಅದನ್ನು (ಗಮನವನ್ನು) ಬೇರೆಡೆಗೆ ತಿರುಗಿಸುತ್ತಿದೆ. ನೇರವಾಗಿ ಹೇಳುತ್ತಿದ್ದೇನೆ, ಚೀನಾ ಬೇರೆ ದೇಶಗಳ ಚುನಾವಣೆ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ, ತನ್ನ ಮಿತಿಯಲ್ಲಿ ಇರಬೇಕು' ಎಂದು ಎಚ್ಚರಿಕೆಯ ಧಾಟಿಯಲ್ಲಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT