ADVERTISEMENT

ಟಿಬೆಟ್‌ನಲ್ಲಿ ಬುಲೆಟ್ ರೈಲು ಪ್ರಾರಂಭಿಸಲಿರುವ ಚೀನಾ

ಪಿಟಿಐ
Published 7 ಮಾರ್ಚ್ 2021, 9:45 IST
Last Updated 7 ಮಾರ್ಚ್ 2021, 9:45 IST
ಬುಲೆಟ್‌ ರೈಲು
ಬುಲೆಟ್‌ ರೈಲು   

ಬೀಜಿಂಗ್‌: ‘ಈ ವರ್ಷ ಜುಲೈ ತಿಂಗಳಲ್ಲಿ ಚೀನಾವು ಅರುಣಾಚಲ ಪ್ರದೇಶದ ಗಡಿ ಸಮೀಪವಿರುವ ಟಿಬೆಟ್‌ಗೆ ಬುಲೆಟ್‌ ರೈಲು ಪ್ರಾರಂಭಿಸಲಿದೆ. ಚೀನಾವು ಪ್ರಾಂತೀಯ ಮಟ್ಟದ ಎಲ್ಲಾ ಪ್ರದೇಶಗಳಿಗೆ ಬುಲೆಟ್‌ ರೈಲು ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಲಾಸಾಗೆ 435 ಕಿ.ಮೀ ದೂರದವರೆಗೆ ಸಂಪರ್ಕ ಕಲ್ಪಿಸುವ ಹೈ ಸ್ಪೀಡ್‌ ಟ್ರೈನ್‌ ಅನ್ನು ಪ್ರಾರಂಭಿಸಲಾಗುವುದು. ಈ ರೈಲು, ಇಂಧನ ಮತ್ತು ವಿದ್ಯುತ್‌ ಚಾಲಿತ ರೈಲು ಆಗಿದೆ’ ಎಂದು ‘ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಲಿಮಿಟೆಡ್‌’ನ ಅಧ್ಯಕ್ಷ ಲು ಡುಂಗ್ಫು ಮಾಹಿತಿ ನೀಡಿದರು.

‘ಲಾಸಾ ಮತ್ತು ನೈಂಗ್‌ಚಿಯೊಗೆ ಸಂಪರ್ಕ ಕಲ್ಪಿಸುವ ಈ ರೈಲ್ವೆ ಹಳಿ ನಿರ್ಮಾಣ ಕಾರ್ಯ 2014ರಲ್ಲಿ ಪ್ರಾರಂಭಗೊಂಡಿತ್ತು. ಇದು ಟಿಬೆಟ್‌ನ ಮೊದಲ ವಿದ್ಯುತ್‌ ಚಾಲಿತ ರೈಲು ಮಾರ್ಗ’ ಎಂದು ಟಿಬೆಟ್‌ನ ರೈಲ್ವೆ ನಿರ್ಮಾಣ ಸಂಸ್ಥೆ ತಿಳಿಸಿದೆ.

ADVERTISEMENT

ಈ ಮಾರ್ಗದಲ್ಲಿ ಚಲಿಸುವಬುಲೆಟ್‌ ರೈಲು ಪ್ರತಿ 1 ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಚೀನಾವು 2025ರ ವೇಳೆ 50,000 ಕಿ.ಮೀ ಉದ್ದದ ಹೈ ಸ್ಪೀಡ್‌ ರೈಲ್ವೆ ಜಾಲವನ್ನು ನಿರ್ಮಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.