ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯ ನಾಲ್ಕು ದಿನಗಳ ಸಭೆ ಗುರುವಾರ ಕೊನೆಗೊಂಡಿತು.
ಸೇನೆಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಮುಖ್ಯಸ್ಥ ಜಾಂಗ್ ಶೆಂಗ್ಮಿನ್ ಅವರನ್ನು ಜನರಲ್ ಹಿ ಅವರ ಸ್ಥಾನಕ್ಕೆ ನೇಮಿಸಲಾಗಿದೆ. ಜಾಂಗ್ ಅವರಿಗೆ ಕೇಂದ್ರ ಸೇನಾ ಆಯೋಗದ (ಸಿಎಂಸಿ) ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಷಿ ಜಿನ್‌ಪಿಂಗ್ ಸಿಎಂಸಿಯ ಅಧ್ಯಕ್ಷರಾಗಿದ್ದು, ಜನರಲ್ ಜಾಂಗ್ ಯೂಕ್ಸಿಯಾ ಅವರು ಸಂಸ್ಥೆಯ ಮತ್ತೊಬ್ಬ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
2026–30ರ ಪಂಚ ವಾರ್ಷಿಕ ಯೋಜನೆಯನ್ನು ಅಂತಿಮಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಅಧಿವೇಶನವು ಸೋಮವಾರದಿಂದ ಆರಂಭವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.