ಶಾಂಘೈ: ವಾತಾವರಣಕ್ಕೆ ಕಡಿಮೆ ಪ್ರಮಾಣದ ಇಂಗಾಲ ಸೇರುವಂತೆ ಮಾಡುವುದನ್ನು ಖಾತರಿಪಡಿಸುವುದು ಸೇರಿದಂತೆ ಹವಾಮಾನ ಬದಲಾವಣೆ ತಡೆಗಾಗಿ ನಿಗದಿಪಡಿಸಿರುವ ಗುರಿಯನ್ನು ತಲುಪಲು ಸಿಚುವಾನ್ ಪ್ರಾಂತ್ಯದ ಆಡಳಿತ ಹೊಸ ಕ್ರಿಯಾ ಯೋಜನೆ ರೂಪಿಸಿದೆ.
ಹವಾಮಾನ ಬದಲಾವಣೆ ತಡೆಗಾಗಿ ನಿಗದಿ ಮಾಡಿರುವ ಗುರಿಗಳನ್ನು ತಲುಪುವ ಸಂಬಂಧ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ ಮೊಟ್ಟಮೊದಲ ಪ್ರಾಂತ್ಯ ಎಂಬ ಹೆಗ್ಗಳಿಕೆ ಸಿಚುವಾನ್‌ದು ಎಂದು ‘ಚೀನಾ ಎನ್ವಿರಾನ್‌ಮೆಂಟ್ ನ್ಯೂಸ್’ ವರದಿ ಮಾಡಿದೆ.
‘ಹೆಚ್ಚು ಸಸಿಗಳನ್ನು ನೆಡುವಂತೆ ಜನರನ್ನು ಪ್ರೋತ್ಸಾಹಿಸುವುದು. ಆ ಮೂಲಕ ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ನಿಯಂತ್ರಿಸುವಂತೆ ಜನರಿಗೆ ಮನವರಿಕೆ ಮಾಡಿಕೊಡುವುದು. ಇಂಧನ ಬಳಕೆಯನ್ನು ಕಡಿತಗೊಳಿಸುವ ಮೂಲಕ ನಗರ ಪ್ರದೇಶದ ವಾತಾವಣರದಲ್ಲಿ ಬದಲಾವಣೆ ತರುವುದು ಈ ಕ್ರಿಯಾಯೋಜನೆಯ ಪ್ರಮುಖ ಅಂಶಗಳಾಗಿವೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.