ADVERTISEMENT

ಹ್ಯೂಸ್ಟನ್‌: ನಾಲ್ಕು ದಶಕಗಳ ಬಳಿಕ ಚೀನಾದ ಕಾನ್ಸುಲೆಟ್‌ ಕಚೇರಿ ಬಂದ್

ಪಿಟಿಐ
Published 25 ಜುಲೈ 2020, 8:37 IST
Last Updated 25 ಜುಲೈ 2020, 8:37 IST
ಹೂಸ್ಟನ್ ನಗರದ ಚೀನಾ ಕಾನ್ಸುಲೇಟ್ ಕಚೇರಿ ಎದುರು ಪೊಲೀಸ್ ಅಧಿಕಾರಿಯೊಬ್ಬರು ನಿಂತಿರುವುದು
ಹೂಸ್ಟನ್ ನಗರದ ಚೀನಾ ಕಾನ್ಸುಲೇಟ್ ಕಚೇರಿ ಎದುರು ಪೊಲೀಸ್ ಅಧಿಕಾರಿಯೊಬ್ಬರು ನಿಂತಿರುವುದು   

ಹ್ಯೂಸ್ಟನ್: ಅಮೆರಿಕದ ಹ್ಯೂಸ್ಟನ್‌ ನಗರದಲ್ಲಿ ಇದ್ದ ಚೀನಾದ ಕಾನ್ಸುಲೆಟ್‌ ಕಚೇರಿಯನ್ನು ಸುಮಾರು ನಾಲ್ಕು ದಶಕಗಳ ಬಳಿಕ ಶುಕ್ರವಾರ ಅಧಿಕೃತವಾಗಿ ಬಂದ್ ಮಾಡಲಾಯಿತು.

ಕೋವಿಡ್-19 ಪಿಡುಗನ್ನು ಚೀನಾ ನಿರ್ವಹಣೆ ಮಾಡಿದ ಕ್ರಮ ಹಾಗೂ ಹಾಂಗ್ ಕಾಂಗ್ ಮೇಲೆ ನಿಯಂತ್ರಣ ಸಾಧಿಸಲು ಚೀನಾ ರೂಪಿಸಿದ ಕಾಯ್ದೆಯ ಬಳಿಕ ಚೀನಾ ಮತ್ತು ಅಮೆರಿಕ ನಡುವಣ ಮನಸ್ತಾಪ ದಿನೇ ದಿನೇ ಹೆಚ್ಚುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಹ್ಯೂಸ್ಟನ್‌ನಲ್ಲಿ ಇರುವ ಕಾನ್ಸುಲೇಟ್ ಕಚೇರಿಯನ್ನು 72 ಗಂಟೆಗಳಲ್ಲಿ ಮುಚ್ಚಲು ಚೀನಾಗೆ ಅಮೆರಿಕ ಸೂಚಿಸಿತ್ತು. ಬೌದ್ಧಿಕ ಆಸ್ತಿ ಹಕ್ಕು ಕಳುವಿಗೆ ಸಂಬಂಧಿತ ಗೂಢಾಚಾರಿಕೆಗೆ ಈ ಕಚೇರಿ ಕೇಂದ್ರಸ್ಥಾನವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ದೂರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.