ಕಠ್ಮಂಡು: ನೇಪಾಳದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಮತ್ತು ದಿಢೀರ್ ಪ್ರವಾಹ ಉಂಟಾಗಿ 11 ಮಂದಿ ಸಾವಿಗೀಡಾಗಿದ್ದು, 25 ಮಂದಿ ನಾಪತ್ತೆಯಾಗಿದ್ದಾರೆ.
ಸಾವಿಗೀಡಾದವರಲ್ಲಿ ಒಬ್ಬ ಭಾರತೀಯರು ಮತ್ತು ಚೀನಾದ ಇಬ್ಬರು ಕಾರ್ಮಿಕರು ಸೇರಿದ್ದಾರೆ. ಚೀನಾದ ಕಂಪನಿ ಕೈಗೊಂಡಿದ್ದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ಈ ಕಾರ್ಮಿಕರು ದುಡಿಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಕಾರ್ಮಿಕರ ಮೃತದೇಹಗಳು ಸಿಂಧುಪಾಲ್‌ಚೌಕ್ ಜಿಲ್ಲೆಯ ಮೆಲಾಮ್ಚಿಯಲ್ಲಿ ಪತ್ತೆಯಾಗಿವೆ.
ಕಳೆದ ಮಂಗಳವಾರದಿಂದ ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಪಾರ ಹಾನಿಯಾಗಿದೆ. ರಸ್ತೆಗಳು, ಸೇತುವೆಗಳು, ಮನೆಗಳು ಹಾನಿಗೊಂಡಿವೆ. ನೂರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಹಲವರು ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.