ADVERTISEMENT

ಭಾರತ-ಚೀನಾ ಗಡಿ: ಯುದ್ಧ ಸಿದ್ಧತೆ ಪರಿಶೀಲಿಸಿದ ಷಿ ಜಿನ್‌ಪಿಂಗ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 11:25 IST
Last Updated 20 ಜನವರಿ 2023, 11:25 IST
ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್   

ಬೀಜಿಂಗ್: ಪೂರ್ವ ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಿರುವ ಸೇನಾ ತುಕಡಿ ಯುದ್ಧ ಸ್ಥಿತಿ ಎದುರಿಸಲು ಸಜ್ಜುಗೊಂಡಿದೆಯೇ ಎಂಬುದನ್ನು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ವಿಡಿಯೊ ಸಂವಾದ ಮೂಲಕ ಪರಿಶೀಲಿಸಿದರು ಎಂದು ಅಧಿಕೃತ ಮಾಧ್ಯಮ ಶುಕ್ರವಾರ ವರದಿ ಮಾಡಿವೆ.

ಷಿಜಿಯಾಂಗ್ ಮಿಲಿಟರಿ ಕಮಾಂಡ್‌ ಅಡಿಯ ಖುಂಜೇರಾಬ್‌ನಲ್ಲಿ ಗಡಿ ರಕ್ಷಣಾ ಪರಿಸ್ಥಿತಿ ಬಗ್ಗೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಪ್ರಧಾನ ಕಚೇರಿಯಿಂದ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶ ನಿರಂತರವಾಗಿ ಹೇಗೆ ಬದಲಾಗುತ್ತಿದೆ ಮತ್ತು ಅದು ಸೇನೆ ಮೇಲೆ ಹೇಗೆ ಪರಿಣಾಮ ಬೀರಿದೆ’ ಎಂಬುದನ್ನು ಷಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ.

ADVERTISEMENT

ಈಗ ಗಡಿಯಲ್ಲಿ 24 ಗಂಟೆಗಳ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಸೈನಿಕರೊಬ್ಬರು ಉತ್ತರಿಸಿದರು.

ಸೈನಿಕರ ಸ್ಥಿತಿ ಬಗ್ಗೆ ಕೇಳಿದ ಷಿ, ವಾಸಯೋಗ್ಯ ಪ್ರದೇಶದಲ್ಲಿ ಅವರು ತಾಜಾ ತರಕಾರಿಗಳನ್ನು ಸ್ವೀಕರಿಸಲು ಸಮರ್ಥರಾಗಿದ್ದಾರೆಯೇ ಎಂದು ಕೇಳಿದರು.

ಗಡಿ ಗಸ್ತು ಮತ್ತು ನಿರ್ವಹಣಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು, ಸೈನಿಕರನ್ನು ಗಡಿ ರಕ್ಷಣೆಯ ಮಾದರಿ ಎಂದು ಶ್ಲಾಘಿಸಿದರು ಮತ್ತು ಅವರ ಪ್ರಯತ್ನಗಳಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.