ADVERTISEMENT

ಯುದ್ಧ ಸನ್ನದ್ಧತೆ, ಸಮರ ಕೌಶಲ ಹೆಚ್ಚಿಸಲು ಸೇನಾಧಿಕಾರಿಗಳಿಗೆ ಜಿನ್‌ಪಿಂಗ್‌ ಸೂಚನೆ

ಪಿಟಿಐ
Published 5 ಜನವರಿ 2021, 15:53 IST
Last Updated 5 ಜನವರಿ 2021, 15:53 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬೀಜಿಂಗ್‌: ಯುದ್ಧ ಕೌಶಲಗಳನ್ನು ಹೆಚ್ಚಿಸುವ ತರಬೇತಿಯನ್ನು ಚುರುಕುಗೊಳಿಸುವ ಜೊತೆಗೆ ಸೇನಾಪಡೆಗಳನ್ನು ಸಮರ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಸೇನಾಧಿಕಾರಿಗಳಿಗೆ ಸೂಚಿಸಿದ್ದಾರೆ.

ನೂತನ ರಕ್ಷಣಾ ಕಾನೂನುಗಳು ಈ ವರ್ಷದಿಂದ ಜಾರಿಯಾಗುವ ಕಾರಣ, ಸೇನೆ ಕಟ್ಟೆಚ್ಚರದಿಂದ ಇರಬೇಕು ಎಂದೂ ಅವರು ಸೂಚಿಸಿದ್ದಾರೆ ಎಂದು ಸರ್ಕಾರಿ ಒಡೆತನದ ಚೀನಾ ಡೈಲಿ ಮಂಗಳವಾರ ವರದಿ ಮಾಡಿದೆ.

ಚೀನಾ ಕಮ್ಯುನಿಸ್ಟ್‌ ಪಕ್ಷ ಹಾಗೂ ಸೆಂಟ್ರಲ್‌ ಮಿಲಿಟರಿ ಕಮಿಷನ್‌ನ ಅಧ್ಯಕ್ಷರೂ ಆಗಿರುವ ಜಿನ್‌ಪಿಂಗ್‌, ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಹಾಗೂ ಪೀಪಲ್ಸ್‌ ಆರ್ಮ್ಡ್ ಫೋರ್ಸ್‌ (ಪಿಎಲ್‌ಎಫ್‌)ನ ತರಬೇತಿಗೆ ಸಂಬಂಧಿಸಿದ ಮೊದಲ ಆದೇಶಕ್ಕೆ ಸಹಿ ಹಾಕಿದರು ಎಂದೂ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಯಾವುದೇ ಕ್ಷಣದಲ್ಲಾದರೂ ಕಾರ್ಯಾಚರಣೆ ಆರಂಭಿಸಲು ಸಶಸ್ತ್ರ ಪಡೆಗಳು ಸನ್ನದ್ಧವಾಗಿರುವಂತೆ ಷಿ ಜಿನ್‌ಪಿಂಗ್‌ ಸೂಚಿಸಿದ್ದಾರೆ’ ಎಂದು ಹಾಂಗ್‌ಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.