ADVERTISEMENT

ಚೀನಾದಲ್ಲಿ ಜನನ ಪ್ರಮಾಣ ಹೆಚ್ಚಿಸಲು 30 ದಿನಗಳ ವೇತನದೊಂದಿಗೆ ‘ಮದುವೆ ರಜೆ’

ರಾಯಿಟರ್ಸ್
Published 21 ಫೆಬ್ರುವರಿ 2023, 14:35 IST
Last Updated 21 ಫೆಬ್ರುವರಿ 2023, 14:35 IST
.ಸಾಂಕೇತಿಕ ಚಿತ್ರ
.ಸಾಂಕೇತಿಕ ಚಿತ್ರ   

ಹಾಂಗ್‌ಕಾಂಗ್‌ (ರಾಯಿಟರ್ಸ್‌): ಜನನ ಪ್ರಮಾಣ ಹೆಚ್ಚಿಸಲು ಚೀನಾದ ಕೆಲವು ಪ್ರಾಂತ್ಯಗಳು ನವ ವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುತ್ತಿವೆ ಎಂದು ಕಮ್ಯುನಿಸ್ಟ್‌ ಪಕ್ಷದ ಮುಖವಾಣಿ ಪೀಪಲ್ಸ್‌ ಡೈಲಿ ಹೆಲ್ತ್‌ ಮಂಗಳವಾರ ತಿಳಿಸಿದೆ.

ಚೀನಾದಲ್ಲಿ ವೇತನ ಸಹಿತ ಮದುವೆ ರಜೆಯನ್ನು ಮೂರು ದಿನ ಮಾತ್ರ ನೀಡಲಾಗುತ್ತದೆ. ಆದರೆ, ಫೆಬ್ರುವರಿಯಿಂದ ಚೀನಾದ ಕೆಲವು ಪ್ರಾಂತ್ಯಗಳು ಹೆಚ್ಚು ಉದಾರವಾಗಿ ರಜೆ ಭತ್ಯೆ ನೀಡಲು ನಿರ್ಧರಿಸಿವೆ.

‘ವಾಯುವ್ಯ ಪ್ರಾಂತ್ಯದ ಗನ್ಸು ಮತ್ತು ಕಲ್ಲಿದ್ದಲು-ಉತ್ಪಾದಿಸುವ ಶಾಂಕ್ಸಿ ಪ್ರಾಂತ್ಯವು ಈಗ 30 ದಿನ ರಜೆ ನೀಡುತ್ತಿದೆ. ಆದರೆ ಶಾಂಘೈ 10 ದಿನ ಮತ್ತು ಸಿಚುವಾನ್ ಕೇವಲ ಮೂರು ದಿನ ಮದುವೆ ರಜೆ ನೀಡುತ್ತಿದೆ’ ಪೀಪಲ್ಸ್ ಡೈಲಿ ಹೆಲ್ತ್ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.