ADVERTISEMENT

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಚೀನಾದ ಬಾಹ್ಯಾಕಾಶ ನೌಕೆ

ಪಿಟಿಐ
Published 2 ಜೂನ್ 2024, 2:53 IST
Last Updated 2 ಜೂನ್ 2024, 2:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್: ಚಂದ್ರನ ಕುರಿತಾದ ಸಂಶೋಧನೆಯ 6ನೇ ಮಿಷನ್ ಆಗಿ ಚೀನಾ ಕಳುಹಿಸಿರುವ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟಿದೆ. ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿ ಸಂಗ್ರಹದ ಮೂಲಕ ಚಂದ್ರನ ಈ ಭಾಗದಲ್ಲಿರುವ ವಿಶೇಷತೆಯನ್ನು ಅವಲೋಕನ ಮಾಡುವುದು ಈ ಸಂಶೋಧನೆಯ ಉದ್ದೇಶವಾಗಿದೆ.

ಚೀನಾ ಸಮಯ ಬೆಳಿಗ್ಗೆ 6:23ರ ಸುಮಾರಿಗೆ ಲ್ಯಾಂಡಿಂಗ್ ರೋವರ್ ದಕ್ಷಿಣ ಧ್ರುವ ’ಐಟ್ಕೆನ್ ಬೇಸಿನ್‘ ಎಂದು ಕರೆಯಲ್ಪಡುವ ಬೃಹತ್ ಕುಳಿಯಲ್ಲಿ ಇಳಿದಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ತಿಳಿಸಿದೆ.

ಚೀನಾದ ಈ 6ನೇ ಚಂದ್ರಯಾನಕ್ಕೆ ‘ಚೈನೀಸ್ ಮೂನ್ ಗಾಡೆಸ್’ ಎಂದು ಹೆಸರಿಡಲಾಗಿದೆ.

ADVERTISEMENT

ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿ ಸಂಗ್ರಹಕ್ಕಾಗಿ ರೂಪಿಸಲಾಗಿರುವ ಎರಡನೇ ಬಾಹ್ಯಾಕಾಶ ನೌಕೆ ಇದಾಗಿದೆ. 2020ರಲ್ಲಿ ಚಂದ್ರನ ದಕ್ಷಿಣ ಧ್ರುವದಿಂದ ಕೊಂಚ ದೂರದಲ್ಲಿ ಇಳಿದಿದ್ದ ಚಾಂಗ್–5 ಉಪಗ್ರಹವು ಅಧ್ಯಯನ ನಡೆಸಿತ್ತು.

ಅಮೆರಿಕ, ಭಾರತ ಮತ್ತು ಜಪಾನ್‌ನಿಂದ ಎದುರಾಗುತ್ತಿರುವ ಬಾಹ್ಯಾಕಾಶ ಸಂಶೋಧನೆಯ ಸವಾಲನ್ನು ಎದುರಿಸುತ್ತಿರುವ ಚೀನಾ, ನಿರಂತರವಾಗಿ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುತ್ತಿದೆ.

2030ರೊಳಗೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸಬೇಕೆಂಬ ಸ್ಪರ್ಧೆ ವಿಶ್ವದಾದ್ಯಂತ ಏರ್ಪಟ್ಟಿದೆ. ಚಂದ್ರನ ಅಂಗಳಕ್ಕೆ ಗಗನಯಾನಿಯನ್ನು ಕಳುಹಿಸಲು ಅಮೆರಿಕ ಮತ್ತೊಮ್ಮೆ ಯೋಜನೆ ರೂಪಿಸಿದೆ. ಈ ವರ್ಷವೇ ನಾಸಾ ಆ ಸಾಹಸಕ್ಕೆ ಮುಂದಾಗುವ ಸಾಧ್ಯತೆ ಇದೆ.

50 ವರ್ಷಗಳಿಗೂ ಹಿಂದೆ ಅಮೆರಿಕ ಮೊದಲ ಬಾರಿಗೆ ಗಗನಯಾನಿಯನ್ನು ಕಳುಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.