ADVERTISEMENT

ಎಚ್‌1– ಬಿ ವೀಸಾಗೆ ಶುಲ್ಕ: ಆದೇಶ ಮರುಪರಿಶೀಲಿಸಲು ಅಮೆರಿಕ ಸಂಸದರ ಒತ್ತಾಯ

ಪಿಟಿಐ
Published 1 ನವೆಂಬರ್ 2025, 14:05 IST
Last Updated 1 ನವೆಂಬರ್ 2025, 14:05 IST
<div class="paragraphs"><p>ಎಚ್‌1–ಬಿ ವೀಸಾ:</p></div>

ಎಚ್‌1–ಬಿ ವೀಸಾ:

   

ನ್ಯೂಯಾರ್ಕ್‌/ವಾಷಿಂಗ್ಟನ್‌: ಎಚ್‌1–ಬಿ ವೀಸಾಗೆ ಅರ್ಜಿ ಸಲ್ಲಿಸಲು ಅಮೆರಿಕ ಕಂಪನಿಗಳು 1 ಲಕ್ಷ ಡಾಲರ್‌ (ಸುಮಾರು ₹88 ಲಕ್ಷ) ಶುಲ್ಕ ಪಾವತಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವುದಕ್ಕೆ ಹಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದು, ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

‘ಇತ್ತೀಚೆಗೆ ಭಾರತಕ್ಕೆ ನಮ್ಮ ನಿಯೋಗವು ಭೇಟಿ ನೀಡಿತ್ತು. ಅಮೆರಿಕದ ಆರ್ಥಿಕತೆ, ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲ ಭಾರತದೊಂದಿಗಿನ ಸಂಬಂಧಕ್ಕೂ ಎಚ್‌1– ಬಿ ವೀಸಾ ಮಹತ್ವದ್ದಾಗಿದೆ. ನಮ್ಮ ದೇಶದ ಐಟಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದ ಬೆಳವಣಿಗೆಯಲ್ಲಿ ಭಾರತೀಯರು ಪ್ರಮುಖ ಪಾತ್ರವಹಿಸುತ್ತಾರೆ’ ಎಂದು ಸಂಸದರು ಟ್ರಂಪ್‌ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.

ADVERTISEMENT

‘ಅಮೆರಿಕದ ಅತ್ಯಂತ ಯಶಸ್ವಿ ಕಂಪನಿಗಳನ್ನು ಎಚ್‌1– ಬಿ ವೀಸಾದೊಂದಿಗೆ ಇಲ್ಲಿಗೆ ಬಂದವರೇ ಕಟ್ಟಿ ನಿಲ್ಲಿಸಿದ್ದಾರೆ. ಇದರಿಂದ ಹೊಸ ವ್ಯಾಪಾರ, ಉದ್ಯೋಗ ಸೃಷ್ಟಿಯಾಗಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕವು ಮುಂಚೂಣಿಯಲ್ಲಿ ಇರುವಂತೆ ಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಚ್‌–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಟ್ರಂಪ್ ಅವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.