ADVERTISEMENT

ತಾಲಿಬಾನ್‌ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌–ಹಖ್ಖಾನಿ ಗುಂಪಿನ ಸಂಘರ್ಷ

ಐಎಎನ್ಎಸ್
Published 5 ಸೆಪ್ಟೆಂಬರ್ 2021, 9:19 IST
Last Updated 5 ಸೆಪ್ಟೆಂಬರ್ 2021, 9:19 IST
ಮುಲ್ಲಾ ಅಬ್ದುಲ್ ಘನಿ ಬರದರ್ – ಎಎಫ್‌ಪಿ ಚಿತ್ರ
ಮುಲ್ಲಾ ಅಬ್ದುಲ್ ಘನಿ ಬರದರ್ – ಎಎಫ್‌ಪಿ ಚಿತ್ರ   

ಕಾಬೂಲ್: ಹಖ್ಖಾನಿ ಬೆಂಬಲಿತ ಗುಂಪುಗಳು ಮತ್ತು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ನಡುವೆ ಘರ್ಷಣೆ ನಡೆದಿದೆ. ಪರಿಣಾಮವಾಗಿ ಬರದರ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ.

ಘಟನೆ ಬೆನ್ನಲ್ಲೇ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯ ಮುಖ್ಯಸ್ಥ ಫೈಜ್ ಹಮೀದ್ ಕಾಬೂಲ್‌ಗೆ ತೆರಳಿದ್ದಾರೆ.

ಹಖ್ಖಾನಿ ಮತ್ತು ತಾಲಿಬಾನ್‌ನ ಇತರ ಕೆಲವು ಬಣಗಳು ಹೈಬತುಲ್ಲಾ ಅಖುಂಜಾದರನ್ನು ನಾಯಕನೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ‘ಐಎಎನ್‌ಎಸ್’ ವರದಿ ಮಾಡಿದೆ.

ADVERTISEMENT

ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ತಾಲಿಬಾನ್ ಮುಂದಿನ ವಾರಕ್ಕೆ ಮುಂದೂಡಿರುವುದಾಗಿ ತಾಲಿಬಾನ್ ಶನಿವಾರ ತಿಳಿಸಿತ್ತು. ಇದರಿಂದಾಗಿ ಅಫ್ಗಾನಿಸ್ತಾನದ ಆಡಳಿತ ಚುಕ್ಕಾಣಿ ಹಿಡಿಯುವುದು ವಿಳಂಬವಾಗಲಿದೆ.

ಈ ಮಧ್ಯೆ, ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ಸಂಭವಿಸುವ ಸಾಧ್ಯತೆ ಇದೆ’ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಮಾರ್ಕ್ ಮಿಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.