ADVERTISEMENT

ಸುಡಾನ್‌: ಕದನ ವಿರಾಮ ಅಂತ್ಯ, ಮತ್ತೆ ಘರ್ಷಣೆ ಆರಂಭ

ಎಎಫ್‌ಪಿ
Published 11 ಜೂನ್ 2023, 14:04 IST
Last Updated 11 ಜೂನ್ 2023, 14:04 IST
ಕದನ ವಿರಾಮ ಅಂತ್ಯವಾದ ಬಳಿಕ ಖಾರ್ಟೋಮ್‌ ನಗರದ ದಕ್ಷಿಣ ಭಾಗದಲ್ಲಿನ ಮನೆಯೊಂದರ ಮೇಲೆ ಶೆಲ್‌ ದಾಳಿ ನಡೆದಿರುವುದು– ಎಎಫ್‌ಪಿ ಚಿತ್ರ
ಕದನ ವಿರಾಮ ಅಂತ್ಯವಾದ ಬಳಿಕ ಖಾರ್ಟೋಮ್‌ ನಗರದ ದಕ್ಷಿಣ ಭಾಗದಲ್ಲಿನ ಮನೆಯೊಂದರ ಮೇಲೆ ಶೆಲ್‌ ದಾಳಿ ನಡೆದಿರುವುದು– ಎಎಫ್‌ಪಿ ಚಿತ್ರ   

ಖಾರ್ಟೋಮ್‌: 24 ಗಂಟೆಗಳ ಕದನ ವಿರಾಮ ಅಂತ್ಯವಾಗುತ್ತಿದ್ದಂತೆ  ಸುಡಾನ್‌ ರಾಜಧಾನಿಯಲ್ಲಿ ಭಾನುವಾರ ಮತ್ತೆ ಶೆಲ್ ಮತ್ತು ಗುಂಡಿನ ದಾಳಿ ಆರಂಭವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆ ಕಳೆದ ಏಪ್ರಿಲ್‌ನಲ್ಲಿ ಆರಂಭವಾಗಿತ್ತು.

ಕದನ ವಿರಾಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನರು ನಿತ್ಯದ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದ್ದರು. ಆದರೆ, ಅಮೆರಿಕ ಮತ್ತು ಸೌದಿ ಅರೇಬಿಯಾದ ಮಧ್ಯವರ್ತಿಗಳು ಭಾನುವಾರ ಕದನ ವಿರಾಮ ಮುಗಿದಿದೆ ಎಂದು ಘೋಷಣೆ ಮಾಡಿದ 10 ನಿಮಿಷದಲ್ಲಿ ಘರ್ಷಣೆ ಆರಂಭವಾಗಿದೆ ಎಂದು ಸುದ್ದಿಸಂಸ್ಥೆಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಒಂದು ದಿನದ ವಿರಾಮ ಕನಸಿನ ತರಹ ಇತ್ತು, ಅದೂ ಹೋಯಿತು’ ಎಂದು ಆರಂಭವಾಗಿರುವ ಘರ್ಷಣೆಯ ಬಗ್ಗೆ ಖಾರ್ಟೋಮ್‌ ನಿವಾಸಿ ನಸ್ರೆದ್ದೀನ್‌ ಅಹಮದ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಖಾರ್ಟೋಮ್‌ ಮತ್ತು ಅವಳಿ ನಗರ ಒಮಡ್ರುಮನ್‌ನ ಉತ್ತರ ಭಾಗದಲ್ಲಿ ಫಿರಂಗಿಗಳ ದಾಳಿ ಶಬ್ದ ಕೇಳಿಸುತ್ತಿದೆ, ಅಲ್‌– ಹವಾ ನಗರದಲ್ಲಿ ಗಲಾಟೆ ಕೂಡ ನಡೆದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.