ADVERTISEMENT

ಟರ್ಕಿ: ರೈಲು–ಮಿನಿ ಬಸ್‌ ಡಿಕ್ಕಿ; ನಾಲ್ವರು ಸಾವು

ಏಜೆನ್ಸೀಸ್
Published 4 ಸೆಪ್ಟೆಂಬರ್ 2021, 11:11 IST
Last Updated 4 ಸೆಪ್ಟೆಂಬರ್ 2021, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ತಾಂಬುಲ್‌: ವಾಯವ್ಯ ಟರ್ಕಿಯಲ್ಲಿ ಸರಕು ಸಾಗಣೆ ರೈಲು ಮತ್ತು ಮಿನಿ ಬಸ್‌ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಎಂಟು ಮಂದಿಗೆ ಗಾಯಗಳಾಗಿವೆ ಎಂದು ಟರ್ಕಿ ಸುದ್ದಿ ಸಂಸ್ಥೆಡೆಮಿರೊರೆನ್ ವರದಿ ಮಾಡಿದೆ.

‌ಈ ಘಟನೆ ಟೆಕಿರ್‌ಡಾಗ್‌ ಪ್ರಾಂತ್ಯದ ಎರ್ಗೆನ್‌ ಬಳಿಯ ರೈಲ್ವೆ–ರಸ್ತೆ ಕ್ರಾಸಿಂಗ್‌ನಲ್ಲಿ ನಡೆದಿದೆ ಎಂದು ವರದಿ ಹೇಳಿದೆ.

‘ಸಾವಿಗೀಡಾದ ನಾಲ್ವರು ಮಿನಿ ಬಸ್ಸಿನ ಪ್ರಯಾಣಿಕರಾಗಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.