ADVERTISEMENT

ಪರಿಶುದ್ಧ ಇಂಧನ ಗುರಿ ತಲುಪಲು ಜಾಗತಿಕ ಕ್ರಮ ಅಗತ್ಯ: ಸಚಿವ ರಾಜ್‌ಕುಮಾರ್ ಸಿಂಗ್‌

ವಿಶ್ವಸಂಸ್ಥೆಯಲ್ಲಿ ನಡೆದ ಇಂಧನ ಕುರಿತ ಚರ್ಚೆಯಲ್ಲಿ ಕೇಂದ್ರ ಸಚಿವ ರಾಜ್‌ಕುಮಾರ್ ಸಿಂಗ್‌

ಪಿಟಿಐ
Published 11 ಮಾರ್ಚ್ 2021, 7:05 IST
Last Updated 11 ಮಾರ್ಚ್ 2021, 7:05 IST
ರಾಜ್‌ಕುಮಾರ್ ಸಿಂಗ್‌
ರಾಜ್‌ಕುಮಾರ್ ಸಿಂಗ್‌   

ವಿಶ್ವಸಂಸ್ಥೆ: ಎಲ್ಲರಿಗೂ ಕೈಗೆಟುಕುವ ಮತ್ತು ಶುದ್ಧ ಇಂಧನ ಲಭ್ಯವಾಗುವಂತೆ ಮಾಡುವುದು ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದ್ದು, ಈ ಗುರಿ ತಲುಪಲು ಜಾಗತಿಕ ಮಟ್ಟದ ಸಹಕಾರ, ದೃಢವಾದ ರಾಜಕೀಯ ಇಚ್ಛಾಶಕ್ತಿಯ ಜತೆಗೆ ಇಂಧನ ಲಭ್ಯತೆಯನ್ನು ಹೆಚ್ಚಿಸುವ ಹಾಗೂ ನವೀಕರಿಸಬಹುದಾದಇಂಧನಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಭಾರತ ಹೇಳಿದೆ.

ಇಂಧನ ವಿಷಯದ ಮೇಲಿನ ವಿಶ್ವಸಂಸ್ಥೆಯ ಉನ್ನತ ಮಟ್ಟದ ಚರ್ಚೆಯಲ್ಲಿ ವರ್ಚುವಲ್‌ ರೂಪದಲ್ಲಿ ಪಾಲ್ಗೊಂಡು ಮಾತನಾಡಿದಕೇಂದ್ರದ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ರಾಜ್ ಕುಮಾರ್ ಸಿಂಗ್, ಈ ವಿಷಯದಲ್ಲಿ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಅಂತರರಾಷ್ಟ್ರೀಯ ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದರು.

‘20ಕ್ಕೂ ಅಧಿಕ ರಾಷ್ಟ್ರಗಳು ಈ ಚರ್ಚೆಯಲ್ಲಿ ಪಾಲ್ಗೊಂಡವು. ಜಗತ್ತಿನಲ್ಲಿ ಇನ್ನೂ 80 ಕೋಟಿ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. 300 ಕೋಟಿ ಜನರು ಸ್ವಚ್ಛ, ಆಧುನಿಕ ಅಡುಗೆ ಇಂಧನದಿಂದ ವಂಚಿತರಾಗಿದ್ದಾರೆ, ಘನ ಅಡುಗೆ ಇಂಧನಗಳ ಸಮಸ್ಯೆಯಿಂದಲೇ ವರ್ಷಕ್ಕೆ 16 ಲಕ್ಷ ಮಂದಿ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಅವಧಿಗೆ ಮೊದಲೇ ಸಾಯುತ್ತಿದ್ದಾರೆ’ ಎಂದು ಚರ್ಚೆಯ ವೇಳೆ ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.