ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೆರವಾಗಿರುವ ಪೋಪ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತು ಚರ್ಚಿಸಲು ವಿಶ್ವದಾದ್ಯಂತ ಇರುವ ಕಾರ್ಡಿನಲ್‌ಗಳು ಈ ವಾರ ಸಭೆ ನಡೆಸಲಿದ್ದಾರೆ.
ವ್ಯಾಟಿಕನ್ ಸಿಟಿಯಲ್ಲಿರುವ ‘ಸಿಸ್ಟಿನ್ ಚಾಪೆಲ್’ನಲ್ಲಿ (ಪೋಪ್ ಅವರ ಅಧಿಕೃತ ನಿವಾಸ) ಮೇ 7ರಿಂದ ರಹಸ್ಯ ಸಭೆ ನಡೆಯಲಿದೆ.
135 ಕಾರ್ಡಿನಲ್‌ಗಳ ಪೈಕಿ 80 ಕಾರ್ಡಿನಲ್‌ಗಳು ಮತದಾನದ ಅಧಿಕಾರ ಹೊಂದಿದ್ದಾರೆ. ಇವರಲ್ಲಿ 71 ವಿವಿಧ ದೇಶಗಳ ಪ್ರತಿನಿಧಿಗಳಿದ್ದು, ‘ಇತಿಹಾಸದಲ್ಲೇ ವೈವಿಧ್ಯಮಯ ಭೌಗೋಳಿಕ ಸಭೆ’ ಎಂಬ ಕೀರ್ತಿಗೆ ಭಾಜನವಾಗಿದೆ.
135 ಕಾರ್ಡಿನಲ್‌ಗಳ ಪೈಕಿ ಆರೋಗ್ಯದ ಕಾರಣಕ್ಕಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇಬ್ಬರು ಕಾರ್ಡಿನಲ್‌ಗಳು ವ್ಯಾಟಿಕನ್ ಸಿಟಿಯ ಕ್ಯಾಥೋಲಿಕ್ ಚರ್ಚ್‌ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸಿಸ್ಟಿನ್ ಚಾಪೆಲ್ ಅನ್ನು ಪ್ರವೇಶಿಸುವ ಕಾರ್ಡಿನಲ್‌ಗಳ ಸಂಖ್ಯೆ 133ಕ್ಕೆ ಇಳಿಕೆಯಾಗಿದ್ದು, ಪೋಪ್ ಆಗಿ ಆಯ್ಕೆಯಾಗಬಯಸುವವರು ಕನಿಷ್ಠ 89 ಮತಗಳನ್ನು ಪಡೆಯಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.