ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಯನ್ನು ಚುನಾಯಿಸಲು ಮೇ 7ರಿಂದ ರಹಸ್ಯ ಸಭೆ ಆರಂಭಿಸಲು ಕ್ಯಾಥೋಲಿಕ್ ಕಾರ್ಡಿನಲ್‌ಗಳು ಸೋಮವಾರ ನಿರ್ಧರಿಸಿದ್ದಾರೆ.
ರಹಸ್ಯ ಮತದಾನ ಪ್ರಕ್ರಿಯೆ ಎರಡು ದಿನ ವಿಳಂಬವಾಗಿದೆ. ಇದರಿಂದಾಗಿ, ಸಿಸ್ಟೀನ್ ಛಾಪೆಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಮುನ್ನ ಒಬ್ಬರ ಬಗ್ಗೆ ಒಬ್ಬರು ತಿಳಿದುಕೊಳ್ಳಲು ಮತ್ತು ಒಬ್ಬ ಅಭ್ಯರ್ಥಿಯ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರುವುದಕ್ಕೆ ಅನುಕೂಲವಾಗಲಿದೆ.
ಸಭೆ ಆರಂಭವಾದ ನಂತರ ಕಾರ್ಡಿನಲ್‌ಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ. ಸಭೆಯಲ್ಲಿ ಪೋಪ್ ಮತ್ತು ಚರ್ಚ್‌ಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಕಾರ್ಡಿನಲ್‌ಗಳ ಜ್ಞಾನ, ಪಾಂಡಿತ್ಯದ ಆಧಾರದಲ್ಲಿ ಅವರಲ್ಲೇ ಒಬ್ಬರನ್ನು ಪೋಪ್ ಆಗಿ ಆಯ್ಕೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.