

ಬುಕಾವಾ: ಕಾಂಗೊದ ಲೌಲಾಬಾ ಪ್ರಾಂತ್ಯದಲ್ಲಿ ಗಣಿಗಾರಿಕೆ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಕನಿಷ್ಠ 32 ಮಂದಿ ಶನಿವಾರ ಮೃತಪಟ್ಟಿದ್ದಾರೆ.
ಪ್ರಾಂತ್ಯದ ಮುಲೊಂಡೊದಲ್ಲಿರುವ ಕಲಾಂಡೊ ತಾಮ್ರ ಮತ್ತು ಕೊಬಾಲ್ಟ್ ಗಣಿಗಾರಿಕೆ ಸ್ಥಳದಲ್ಲಿದ್ದ ಸೇತುವೆ ಮೇಲೆ ಹೆಚ್ಚಿನ ಸಂಖ್ಯೆ ಜನರು ಇದ್ದುದೇ ಕುಸಿತಕ್ಕೆ ಕಾರಣ ಎನ್ನಲಾಗಿದೆ.
‘ಭಾರಿ ಮಳೆ ಮತ್ತು ಭೂಕುಸಿತದ ಅಪಾಯದಿಂದಾಗಿ ಸ್ಥಳಕ್ಕೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಅಕ್ರಮವಾಗಿ ಗಣಿಗಾರಿಕೆ ಮಾಡುವವರು ತೆರಳಿದ್ದಾರೆ’ ಎಂದು ಪ್ರಾಂತ್ಯದ ಒಳಾಡಳಿತ ಸಚಿವ ರಾಯ್ ಕೌಂಬಾ ಮಯೊಂಡೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘಟನೆಯಲ್ಲಿ 40 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.