ADVERTISEMENT

Covid-19 World Update: ಕೋವಿಡ್‌ ಪ್ರಕರಣಗಳು ಹೆಚ್ಚಿರುವ ದೇಶಗಳಿವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 16:45 IST
Last Updated 27 ಸೆಪ್ಟೆಂಬರ್ 2020, 16:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 10 ಲಕ್ಷ ಸಮೀಪಿಸಿದೆ.

ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದ್ದ ಸೋಂಕು ಈಗ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದ್ದು, ಈವರೆಗೆ 3.29 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್‌ ರಿಸೋರ್ಸ್ ಸೆಂಟರ್ ಪ್ರಕಾರ, ಈವರೆಗೆ 9,95,190 ಮಂದಿ ಅಸುನೀಗಿದ್ದಾರೆ. 2.27 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಯಾವ ದೇಶದಲ್ಲಿ ಎಷ್ಟಿದೆ ಸೋಂಕು, ಸಾವು?

ADVERTISEMENT

1– ಅಮೆರಿಕ 70,84,523 (20,4,550)
2– ಭಾರತ 59,92,532(94,503)
3– ಬ್ರೆಜಿಲ್ 47,17,991 (1,41,406)
4– ರಷ್ಯಾ 11,46,273 (20,239)
5– ಕಾಂಬೋಡಿಯಾ 8,06,038 (25,296)
6– ಪೇರು 8,00,142 (32,142)
7– ಮೆಕ್ಸಿಕೊ 72,6,431 (76,243)
8– ಸ್ಪೇನ್‌ 7,16,481 (31,232)
9– ಅರ್ಜೆಂಟೀನಾ 7,02,484 (15,543)
10– ದಕ್ಷಿಣ ಆಫ್ರಿಕಾ 6,69,498 (16,376)

‍ಪಾಕಿಸ್ತಾನ 3,10,275 (6,457)
ಚೀನಾ 90,462 (4,739)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.