ADVERTISEMENT

Covid-19 World Update | ಜಾಗತಿಕವಾಗಿ 98 ಲಕ್ಷ ಜನ ಸೋಂಕಿತರು, 4.95 ಲಕ್ಷ ಸಾವು

ಏಜೆನ್ಸೀಸ್
Published 27 ಜೂನ್ 2020, 15:56 IST
Last Updated 27 ಜೂನ್ 2020, 15:56 IST
ಕೊರೊನಾ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ಪರೀಕ್ಷೆ (ಸಾಂದರ್ಭಿಕ ಚಿತ್ರ)   

ವಾಷಿಂಗ್ಟನ್:ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಾಗತಿಕವಾಗಿ 98 ಲಕ್ಷ ಜನರು ಸೋಂಕಿತರಾಗಿದ್ದು 4.95 ಲಕ್ಷ ಜನರು ಮೃತಪಟ್ಟಿದ್ದಾರೆ.

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕು ಹೆಚ್ಚಾಗಿ ಹರಡುತ್ತಿದ್ದು ಅಮೆರಿಕದಲ್ಲಿ ಇಲ್ಲಿಯವರೆಗೂ24 ಲಕ್ಷ ಜನರಿಗೆ ಸೋಂಕು ತಗುಲಿದ್ದು,1.25 ಲಕ್ಷ ಜನರು ಮೃತಪಟ್ಟಿದ್ದಾರೆ.ಒಂದೇ ದಿನ 40,870 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಸೋಂಕು ಮೊದಲು ಕಂಡುಬಂದ ಬಳಿಕ ದಿನವೊಂದರಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಫ್ಲೊರಿಡಾದಲ್ಲಿ ಒಂದೇ ದಿನ 8,942 ಪ್ರಕರಣಗಳು ಪತ್ತೆಯಾಗಿವೆ. ಜೂನ್ 24ರಂದು ಫ್ಲೊರಿಡಾದಲ್ಲಿ ಒಂದೇ ದಿನ 5,511 ಮಂದಿ ಸೋಂಕಿಗೀಡಾಗಿದ್ದರು. ಆ ಬಳಿಕ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

ADVERTISEMENT

ಬ್ರೆಜಿಲ್‌ನಲ್ಲಿ 12.74 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 55,957 ಸಾವು, ರಷ್ಯಾದಲ್ಲಿ 6.19 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 8,770 ಸಾವು ಸಂಭವಿಸಿದೆ. ಕೋವಿಡ್‌ನಿಂದಾಗಿ ಈವರೆಗೆ ಬ್ರಿಟನ್‌ನಲ್ಲಿ 43,498, ಪೆರುವಿನಲ್ಲಿ 8,939, ಚಿಲೆಯಲ್ಲಿ 5,068, ಸ್ಪೇನ್‌ನಲ್ಲಿ 28,338, ಇಟಲಿಯಲ್ಲಿ 34,708 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.