ADVERTISEMENT

Covid-19 World Update | ಅಮೆರಿಕದಲ್ಲಿ ಒಂದೇ ದಿನ 1,132 ಮಂದಿ ಸಾವು

ಏಜೆನ್ಸೀಸ್
Published 3 ಆಗಸ್ಟ್ 2020, 17:40 IST
Last Updated 3 ಆಗಸ್ಟ್ 2020, 17:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರೆಸಿಲಿಯಾ:ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 18,139, 338 ಆಗಿದೆ. ಇಲ್ಲಿಯವರೆಗೆ 690,452 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 4,682, 461 ಮಂದಿ ಸೋಂಕಿತರಿದ್ದು ಸಾವಿನ ಸಂಖ್ಯೆ 154,992ಕ್ಕೇರಿದೆ.

ಇರಾನ್‌ನಲ್ಲಿ ಕೋವಿಡ್‌ನಿಂದಾಗಿ 347 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 81,400ಕ್ಕೇರಿದೆ. ಯುಎಇಯಲ್ಲಿ 164 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ61163 ಆಗಿದೆ, ಒಟ್ಟು 54863 ಮಂದಿ ಚೇತರಿಸಿಕೊಂಡಿದ್ದಾರೆ.

ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಶ್ನನ್ (ಸಿಡಿಸಿ) ಅಂಕಿ ಅಂಶದ ಪ್ರಕಾರ ಭಾನುವಾರ ಅಮೆರಿಕದಲ್ಲಿ 58,947 ಮಂದಿಗೆ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 4,601,526 ಕ್ಕೇರಿದೆ. ಒಂದೇ ದಿನ 1,132 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 154002 ಆಗಿದೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ ಸೋಂಕಿನಿಂದಾಗಿ ಬ್ರೆಜಿಲ್‌ನಲ್ಲಿ 541 ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ, ಸಾವಿನ ಸಂಖ್ಯೆ 94 ಸಾವಿರ ದಾಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.

ಅತಿಹೆಚ್ಚು ಕೋವಿಡ್‌ ಸೋಂಕಿತರರಿರುವ ದೇಶಗಳ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಒಂದೇ ದಿನ 25,800 ಜನರಿಗೆ ಸೋಂಕು ತಗುಲಿದೆ. ಈವರೆಗೆ 94,104 ಜನ ಮೃತಪಟ್ಟಿದ್ದಾರೆ.

ಶನಿವಾರ ಬ್ರೆಜಿಲ್‌ನಲ್ಲಿ 45,392 ಹೊಸ ಪ್ರಕರಣಗಳು ದೃಢಪಟ್ಟಿದ್ದವು. ಶುಕ್ರವಾರ 52,383 ಪ್ರಕರಣಗಳು ಪತ್ತೆಯಾಗಿದ್ದವು.

ಶುಕ್ರವಾರದ ವೇಳೆಗೆ ಸಾವಿನ ಸಂಖ್ಯೆ ಬ್ರಿಟನ್‌ಗಿಂತಲೂ ಮೆಕ್ಸಿಕೊದಲ್ಲಿ ಹೆಚ್ಚಾಗಿತ್ತು. ಜಾನ್ಸ್ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಈವರೆಗೆ 46,65013 ಜನರು ಸೋಂಕಿತರಾಗಿದ್ದು, 1,54834 ಮಂದಿ ಮೃತಪಟ್ಟಿದ್ದಾರೆ.

ಅತಿಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೂ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.