ADVERTISEMENT

Covid-19 World Update | ‘ಲಸಿಕೆ ದೊರೆತ ಬಳಿಕವೂ ಮಾಸ್ಕ್, ಅಂತರ ಅಗತ್ಯ’

ಅಮೆರಿಕದ ವಿಜ್ಞಾನಿ ಹೇಳಿಕೆ

ಏಜೆನ್ಸೀಸ್
Published 1 ಆಗಸ್ಟ್ 2020, 16:53 IST
Last Updated 1 ಆಗಸ್ಟ್ 2020, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್‌ಗೆ ಲಸಿಕೆ ದೊರೆತ ಬಳಿಕವೂ ಜನರು ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವುದನ್ನು ಮುಂದುವರಿಸಬೇಕಾಗಬಹುದು ಎಂದು ಅಮೆರಿಕದ ಹಿರಿಯ ವಿಜ್ಞಾನಿ ಹೇಳಿದ್ದಾರೆ.

‘ಲಸಿಕೆಯು ಕೊರೊನಾ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಬಹುದಷ್ಟೆ. ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ’ ಎಂದು ಬೇಯ್ಲರ್ ಕಾಲೇಜ್ ಆಫ್ ಮೆಡಿಸಿನ್‌ನ ನ್ಯಾಷನಲ್ ಸ್ಕೂಲ್ ಆಫ್ ಟ್ರೋಪಿಕಲ್ ಮೆಡಿಸಿನ್‌ನ ಅಸೋಸಿಯೇಡ್ ಡೀನ್ ಸಹ ಆಗಿರುವ ಮಾರಿಯಾ ಎಲೆನಾ ಬೊಟಾಜ್ಜಿ ಹೇಳಿದ್ದಾರೆ. ಇವರು ಸದ್ಯ ಲಸಿಕೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.

ಕೊರೊನಾ ವೈರಸ್ ತಡೆಗೆ ವಿಶ್ವದಾದ್ಯಂತ 150ಕ್ಕೂ ಹೆಚ್ಚು ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಈ ಪೈಕಿ 26 ಲಸಿಕೆಗಳು ಮಾನವ ಪ್ರಯೋಗ ಹಂತ ತಲುಪಿವೆ.

ADVERTISEMENT

ಈ ಮಧ್ಯೆ, ಕೊರೊನಾ ವೈರಸ್ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 68 ಲಕ್ಷ ದಾಟಿದೆ. ಒಟ್ಟು 1.76 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 4,579,761 ಮಂದಿಗೆ ಸೋಂಕು ತಗಲುವ ಮೂಲಕ ಅಮೆರಿಕ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 15.36 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.

ಅತಿ ಹೆಚ್ಚು ಸೋಂಕಿತರ ಯಾದಿಯಲ್ಲಿ ಬ್ರೆಜಿಲ್ ಎರಡನೇ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ. ಬ್ರೆಜಿಲ್‌ನಲ್ಲಿ ಈವರೆಗೆ 2,662,485 ಜನರಿಗೆ ಸೋಂಕು ತಗುಲಿದ್ದು, 92,475 ಜನ ಮೃತಪಟ್ಟಿದ್ದಾರೆ. ಭಾರತದಲ್ಲಿ 1,695,988 ಜನ ಸೋಂಕಿತರಾಗಿದ್ದು, 36,511 ಮಂದಿ ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.