ADVERTISEMENT

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2022, 6:04 IST
Last Updated 22 ಡಿಸೆಂಬರ್ 2022, 6:04 IST
 ಡಾ. ಟೆಂಡ್ರೋಸ್ ಅಧನೋಮ್ ಗೆಬ್ರೇಯೆಸಸ್
ಡಾ. ಟೆಂಡ್ರೋಸ್ ಅಧನೋಮ್ ಗೆಬ್ರೇಯೆಸಸ್   

ನವದೆಹಲಿ: ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಪರಿಣಾಮ ವಿಶ್ವ ಆರೋಗ್ಯ ಸಂಸ್ಥೆ ನಿಗಾವಹಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಮಿಕ್ರಾನ್ ಉಪತಳಿಯ ವೈರಸ್‌ ವೇಗವಾಗಿ ಹರಡುತ್ತಿರುವ ಪರಿಣಾಮ ಚೀನಾದಲ್ಲಿನ ಐಸಿಯು ಬೆಡ್‌ಗಳು ಭರ್ತಿಯಾಗುತ್ತಿವೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ವಯೋವೃದ್ಧರು ಸಾವನ್ನಪ್ಪುತ್ತಿದ್ದಾರೆ. ಚೀನಾದ ಬೆಳವಣಿಗೆಗಳ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದ್ದಾರೆ.

ಚೀನಾದ ಕೋವಿಡ್‌ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದುಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ADVERTISEMENT

ಕಡಿಮೆಲಸಿಕೆ,ಬೂಸ್ಟರ್ ಡೋಸ್ ನೀಡುವ ಪ್ರಮಾಣದಲ್ಲಿ ಕುಸಿತ ಹಾಗೂ ಚೀನಾ ಸರ್ಕಾರ ಜೀರೊ ಕೋವಿಡ್‌ ನೀತಿಯನ್ನು ತೆಗೆದು ಹಾಕಿದ್ದೆ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಸುಮಾರು 20 ಲಕ್ಷ ಜನರ ಜೀವಕ್ಕೆ ಕುತ್ತು ಬರಬಹುದು ಎಂದುಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕ ಡಾ. ಟೆಂಡ್ರೋಸ್ ಅಧನೋಮ್ ಗೆಬ್ರೇಯೆಸಸ್ ಕೂಡ ಚೀನಾದಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.