ADVERTISEMENT

Covid-19 World Update: ಬೀಜಿಂಗ್‌ನಲ್ಲಿ ಪ್ರಕರಣಗಳ ಏರಿಕೆ; ಪ್ರಯಾಣಕ್ಕೆ ನಿಷೇಧ

ಏಜೆನ್ಸೀಸ್
Published 17 ಜೂನ್ 2020, 3:38 IST
Last Updated 17 ಜೂನ್ 2020, 3:38 IST
ಬೀಜಿಂಗ್‌ನ ದೃಶ್ಯ  (ರಾಯಿಟರ್ಸ್)
ಬೀಜಿಂಗ್‌ನ ದೃಶ್ಯ (ರಾಯಿಟರ್ಸ್)   

ವಾಷಿಂಗ್ಟನ್: ವರ್ಲ್ಡೊಮೀಟರ್ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2208400 ಆಗಿದೆ. ಈವರೆಗೆ 1,19,132 ಮಂದಿ ಸಾವಿಗೀಡಾಗಿದ್ದಾರೆ.9,03,041 ಮಂದಿ ಚೇತರಿಸಿಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 928834 ಆಗಿದ್ದು, ಸಾವಿನ ಸಂಖ್ಯೆ 45,456ಕ್ಕೇರಿದೆ, ಅದೇ ವೇಳೆ ರಷ್ಯಾದಲ್ಲಿ 7 284 ಮಂದಿ ಮೃತಪಟ್ಟಿದ್ದಾರೆ, ಸೋಂಕಿತರ ಸಂಖ್ಯೆ 545458 ಆಗಿದೆ.

ಬೀಜಿಂಗ್‌ನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗಿದ್ದು , ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ನಾಗರಿಕರು ನಗರದಿಂದ ಹೊರಹೋಗಬಾರದು ಎಂದು ಸರ್ಕಾರ ಆದೇಶಿಸಿದೆ. ಬುಧವಾರ 31 ಹೊಸ ಪ್ರಕರಣಗಳು ವರದಿ ಆಗಿವೆ. ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಇದು ಸೋಂಕಿನ ಎರಡನೇ ಅಲೆ ಆಗಿರಬಹುದೇ ಎಂಬ ಭಯ ಹುಟ್ಟಿಸಿದೆ.ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದು, ಶಾಲೆಗಳು ಮುಚ್ಚಿರುವ ಕಾರಣ ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ.ಕಳೆದ 5 ದಿನಗಳಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ.


ಜಾನ್ಸ್ ಹಾಪ್ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಕೋವಿಡ್‌ನಿಂದಾಗಿ ಜಗತ್ತಿನಾದ್ಯಂತ ಸಾವಿಗೀಡಾದವರ ಸಂಖ್ಯೆ 4.41 ಲಕ್ಷ ಆಗಿದೆ. ಅಮೆರಿಕದಲ್ಲಿ 1,16,917, ಬ್ರೆಜಿಲ್‌ನಲ್ಲಿ 45,241, ಬ್ರಿಟನ್ - 42,054 ಮತ್ತು ಇಟಲಿಯಲ್ಲಿ 34,405 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 81,55,266 ಆಗಿದೆ.ಅಮೆರಿಕದಲ್ಲಿ 2136043, ಬ್ರೆಜಿಲ್‌ನಲ್ಲಿ 923189, ರಷ್ಯಾ- 544725 ಮಂದಿ ಸೋಂಕಿಗೀಡಾಗಿದ್ದಾರೆ. ಭಾರತದಲ್ಲಿ 343091 ಮಂದಿ ಸೋಂಕಿತರಿದ್ದು, ಅತೀ ಹೆಚ್ಚು ಸೋಂಕಿತರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.