ADVERTISEMENT

ಕೋವಿಡ್‌: ಜೈವಿಕ ಭಯೋತ್ಪಾದನೆಗೆ ಮಾರ್ಗ!

ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆತಂಕ

ಪಿಟಿಐ
Published 10 ಏಪ್ರಿಲ್ 2020, 19:40 IST
Last Updated 10 ಏಪ್ರಿಲ್ 2020, 19:40 IST
ಅಂಟೊನಿಯೊ ಗುಟೆರಸ್‌
ಅಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ: ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ಜೈವಿಕ–ಭಯೋತ್ಪಾದನೆ ದಾಳಿ ನಡೆಸುವ ಮಾರ್ಗವನ್ನು ತೋರಿಸಿಕೊಟ್ಟಂತಾಗಿದೆ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌–19ನಿಂದ ಸೃಷ್ಟಿಸಿರುವ ಆರೋಗ್ಯ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ವಿಭಿನ್ನ ರೀತಿಗಳಲ್ಲಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಿದರು.

ಈ ಸಾಂಕ್ರಾಮಿಕ ಕಾಯಿಲೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆವೊಡ್ಡಲಿದೆ. ಇದರಿಂದ, ಹಿಂಸಾಚಾರಕ್ಕೆ ದಾರಿಯಾಗಲಿದೆ. ಜತೆಗೆ, ಈ ರೀತಿಯ ಕಾಯಿಲೆ ತಡೆಯಲು ಸನ್ನದ್ಧರಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಸಿದ್ಧತೆಗಳ ಕೊರತೆಯನ್ನು ಇದು ತೋರಿಸಿಕೊಟ್ಟಿದೆ. ಇದರಿಂದ, ಜೈವಿಕ ದಾಳಿಗೆ ದಾರಿ ಮಾಡಿಕೊಡಲಿದೆ. ದುಷ್ಕೃತ್ಯದಲ್ಲಿ ತೊಡಗಿರುವ ಕೆಲವು ಸಂಘಟನೆಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಜಾಗತಿಕವಾಗಿ ಹಾನಿ ಮಾಡುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.